‘ಸೈರಾ’ದಲ್ಲಿ ರಾಣಿ ಲಕ್ಷ್ಮೀ ಬಾಯಿ ಆದ ಅನುಷ್ಕಾ

ಬೆಂಗಳೂರು, ಆಗಸ್ಟ್ 30, 2019 (www.justkannada.in):  ಅನುಷ್ಕಾ ಶೆಟ್ಟಿ ಈಗ ಮತ್ತೂಂದು ಬಿಗ್‌ ಬಜೆಟ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿದ್ದಾರೆ.

ಭಾಗಮತಿ ಚಿತ್ರದ ನಂತರ ಅನುಷ್ಕಾ ಶೆಟ್ಟಿ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸೈರಾ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ವಿಷಯವನ್ನು ಸ್ವತಃ ಸೈರಾ ಚಿತ್ರತಂಡ ಸ್ಪಷ್ಟಪಡಿಸಿದೆ.

ಅನುಷ್ಕಾ ಶೆಟ್ಟಿ ಸೈರಾ ಚಿತ್ರದಲ್ಲಿ 1857ರ ದಂಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಣಿ ಲಕ್ಷ್ಮೀ ಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.