Thursday, August 6, 2026

BDA Apartments

Home Front Page ಇಂದು ಬೆಂಗಳೂರಿನಲ್ಲಿ ಮಹಾಮೈತ್ರಿಕೂಟದ ಸಭೆ: 24 ವಿಪಕ್ಷಗಳ ನಾಯಕರು ಭಾಗಿ ಸಾಧ್ಯತೆ..

ಇಂದು ಬೆಂಗಳೂರಿನಲ್ಲಿ ಮಹಾಮೈತ್ರಿಕೂಟದ ಸಭೆ: 24 ವಿಪಕ್ಷಗಳ ನಾಯಕರು ಭಾಗಿ ಸಾಧ್ಯತೆ..

ಬೆಂಗಳೂರು,ಜುಲೈ,17,2023(www.justkannada.in):  2024ರ ಲೋಕಸಭಾ ಚುನಾವಣೆ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎಗೆ ಸೆಡ್ಡು ಹೊಡೆದು ಅಧಿಕಾರಕ್ಕೇರಲು ಮಹಾಮೈತ್ರಿಕೂಟ ತಯಾರಿ ನಡೆಸುತ್ತಿದ್ದು ಈ ಮಧ್ಯೆ ಇಂದು ಸಭೆ ನಡೆಸಲಿದೆ.

ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ನಡೆಯಲಿದ್ದು, ಇಂದು ಬೆಂಗಳೂರಿಗೆ ಕಾಂಗ್ರೆಸ್​ ನಾಯಕಿ ಸೋನಿಯಾ, ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ.  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ 24 ವಿಪಕ್ಷಗಳ 49 ನಾಯಕರು ಭಾಗವಹಿಸುವ ಸಾಧ್ಯತೆ ಇದೆ.

ಅಲ್ಲದೇ ವಿಶೇಷ ವಿಮಾನದ ಮೂಲಕ ಉದ್ಧವ್ ಠಾಕ್ರೆ, ಹೇಮಂತ್ ಸೊರೇನ್, ಲಾಲೂ ಪ್ರಸಾದ್, ನಿತೀಶ್, ಶರದ್ ಪವಾರ್ ಕೂಡ ಆಗಮಿಸಲಿದ್ದಾರೆ. ಬಿಹಾರದಲ್ಲೂ ಮಾಹಾಮೈತ್ರಿ ಸಭೆ ನಡೆಸಲಾಗಿತ್ತು.

Key words:  Alliance –party-meeting –Bengaluru- today