Friday, August 7, 2026

BDA Apartments

Home Front Page ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಚಿವರ ಸಭೆಗೂ ಮುನ್ನ ಇಬ್ಬರು ಮಹಿಳಾ ಸದಸ್ಯರಿಂದ ಪ್ರತಿಭಟನೆ…

ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಚಿವರ ಸಭೆಗೂ ಮುನ್ನ ಇಬ್ಬರು ಮಹಿಳಾ ಸದಸ್ಯರಿಂದ ಪ್ರತಿಭಟನೆ…

ಮೈಸೂರು,ಆ,29,2019(www.justkannada.in): ಮೈಸೂರು ಮಹಾನಗರ ಪಾಲಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ. ವಿ ಸೋಮಣ್ಣ   ಸಭೆ ನಡೆಸುವ ಮುನ್ನ ಪಾಲಿಕೆಯ ಇಬ್ಬರು ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದರು.

ಕಾನೂನು ಉಲ್ಲಂಘಿಸಿ, ನಿಯಮ  ಬಾಹಿರವಾಗಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾಗಿರುವ ಶೇ. 24.10 ಅನುದಾನ ತಾರತಮ್ಯ ಮಾಡಿ ಹಂಚಿಕೆ  ಮಾಡಲಾಗಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರಾದ  ಡಾ. ಅಶ್ವಿನಿ ಶರತ್,  ಪಲ್ಲವಿ ಬೇಗಂ  ಪಾಲಿಕೆ ಮುಖ್ಯದ್ವಾರದಲ್ಲಿ  ಕುಳಿತು ಪ್ರತಿಭಟನೆ ನಡೆಸಿದರು.

ಈ ವೇಳೆ ಶಾಸಕ ಎಲ್ ನಾಗೇಂದ್ರ ಅವರು ಇಬ್ಬರು ಮಹಿಳಾ ಸದಸ್ಯರಿಗೆ ಸಮಾಧಾನ ಹೇಳಿ  ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

Key words: Protest -two -women members before – meeting – Mysore –city corporation