Thursday, August 6, 2026

BDA Apartments

Home Front Page ಆಧಾರ್ -ಪಾನ್ ಕಾರ್ಡ್ ಲಿಂಕ್ ಗೆ ನಾಳೆಯೇ ಕೊನೇ ದಿನ.

ಆಧಾರ್ -ಪಾನ್ ಕಾರ್ಡ್ ಲಿಂಕ್ ಗೆ ನಾಳೆಯೇ ಕೊನೇ ದಿನ.

ಮೈಸೂರು,ಜೂನ್,29,2023(www.justkannada.in): ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವ ಅವಧಿ ನಾಳೆಗೆ ಮುಕ್ತಾಯವಾಗಲಿದ್ದು, ಹೀಗಾಗಿ  ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡಿಸದಿದ್ದಲ್ಲಿ ಇಂದೇ ಮಾಡಿಸಿಕೊಳ್ಳಬೇಕಿದೆ.

ಆಧಾರ್ ಪಾನ್ ಕಾರ್ಡ್ ಲಿಂಕ್ ಗೆ ಜೂನ್ 30ರವೆರೆಗೆ ಕೇಂದ್ರ ಸರ್ಕಾರ ಕೊನೆ ಗಡುವು ನೀಡಿದೆ. ಈ ಹಿಂದೆ ಮಾರ್ಚ್ 31ಕ್ಕೆ ಕೊನೆ ಗಡುವು ನೀಡಿತ್ತು. ಬಳಿಕ ಜೂನ್ 30ರ ಅವಧಿಗೆ ವಿಸ್ತರಣೆ ಮಾಡಲಾಗಿತ್ತು. ಸದ್ಯ ಆಧಾರ್ ಪಾನ್ ಕಾರ್ಡ್ ಲಿಂಕ್ ಗೆ 1000 ಸಾವಿರ ರೂ. ನಿಗದಿ ಮಾಡಲಾಗಿದೆ.

ಒಂದು ವೇಳೆ ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡದಿದ್ದಲ್ಲಿ ಪಾನ್ ಕಾರ್ಡ್ ಅಮಾನ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ಇಂದೇ ಲಿಂಕ್ ಮಾಡಿಸಿಕೊಳ್ಳಬೇಕಿದೆ. ಈ ನಡುವೆ ಕೇಂದ್ರ ಸರ್ಕಾರ ಮತ್ತೆ ಆಧಾರ್ ಪಾನ್ ಕಾರ್ಡ್ ಲಿಂಕ್ ಗೆ ಅವಧಿ ವಿಸ್ತರಣೆ ಮಾಡುತ್ತಾ? ನಾಳೆಯೇ ಆಧಾರ್ ಪಾನ್ ಕಾರ್ಡ್ ಲಿಂಕ್ ಗೆ ಅವಧಿ ಮುಗಿಯುತ್ತಾ ಕಾದು ನೋಡಬೇಕಿದೆ.

Key words: Tomorrow – last day -Aadhaar-PAN card- linking.