Tuesday, September 22, 2026

BDA Apartments

Home Front Page ಅಕ್ಕಿ ಬದಲು ಹಣ ನೀಡಿದರೆ ಕುಟುಂಬಗಳಲ್ಲಿ ಗೊಂದಲ: ಪಡಿತರ ವಿತರಕರ ಸಂಘದ ರಾಜ್ಯಧ್ಯಕ್ಷ ಕೃಷ್ಣಪ್ಪ.

ಅಕ್ಕಿ ಬದಲು ಹಣ ನೀಡಿದರೆ ಕುಟುಂಬಗಳಲ್ಲಿ ಗೊಂದಲ: ಪಡಿತರ ವಿತರಕರ ಸಂಘದ ರಾಜ್ಯಧ್ಯಕ್ಷ ಕೃಷ್ಣಪ್ಪ.

ಮಂಡ್ಯ,ಜೂನ್,29,2023(www.justkannada.in):  ಅಕ್ಕಿ ಕೊರತೆ ಹಿನ್ನೆಲೆ 5 ಕೆಜಿ ಅಕ್ಕಿ ಜೊತೆಗೆ ಇನ್ನುಳಿದ 5 ಕೆಜಿ ಅಕ್ಕಿಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನೆಲೆ ಈ ನಡೆಗೆ ಪಡಿತರ ವಿತರಕರ ಸಂಘದ ರಾಜ್ಯಧ್ಯಕ್ಷ ಕೃಷ್ಣಪ್ಪ ಆಕ್ಷೇಪಿಸಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾತನಾಡಿ ಕೃಷ್ಣಪ್ಪ, ಅಕ್ಕಿ ಬದಲು ಹಣ ನೀಡಿದರೆ ಕುಟುಂಬಗಳಲ್ಲಿ ಗೊಂದಲ ಮೂಡಲಿದೆ. ಪ್ರಣಾಳಿಕೆಯಲ್ಲಿ ದುಡ್ಡು ಕೊಡುತ್ತೇವೆ ಎಂದು ಹೇಳಿಲ್ಲ. ಹೇಳಿದಂತೆ ಆಹಾರ ಪದಾರ್ಥಗಳನ್ನೆ ನೀಡಿ. ಅಕ್ಕಿ ಕೊಡಲಾಗದಿದ್ದರೆ ಸಕ್ಕರೆ, ಕಾಳುಗಳನ್ನ ಕೊಡಿ. ದುಡ್ಡು ಕೊಡುವುದರಿಂದ ಮನೆಗಳಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿದೆ ಎಂದಿದ್ದಾರೆ.ಅಕ್ಕಿ ಬದಲು ಹಣ ನೀಡಿದರೆ ಕುಟುಂಬಗಳಲ್ಲಿ ಗೊಂದಲ rice

ಕುಟುಂಬಗಳಲ್ಲಿ ಹಣದ ಕುರಿತು ಮನಸ್ತಾಪ ಉಂಟಾಗುವ ಸಾದ್ಯತೆಯಿದೆ. ಎರಡು ರಾಜ್ಯಗಳಲ್ಲಿ ಈ ರೀತಿ ಹಣ ನೀಡಿದಾಗ ಯೋಜನೆ ಫಲಕಾರಿಯಾಗಿಲ್ಲ ಎಂದು ಕೃಷ್ಣಪ್ಪ ಕಿವಿಮಾತು ಹೇಳಿದ್ದಾರೆ.

Key words: Confusion -families -money – instead – rice.