Tuesday, September 22, 2026

BDA Apartments

ಬಿಜೆಪಿ ನಾಯಕರು ಮೊದಲು ಕೇಂದ್ರದ ಬಳಿ ಮಾತನಾಡಿ ಶೂರರಾಗಲಿ-ಸಚಿವ ದಿನೇಶ್ ಗುಂಡ...
Home Front Page ಬಿಜೆಪಿ ನಾಯಕರು ಮೊದಲು ಕೇಂದ್ರದ ಬಳಿ ಮಾತನಾಡಿ ಶೂರರಾಗಲಿ-ಸಚಿವ ದಿನೇಶ್ ಗುಂಡೂರಾವ್.

ಬಿಜೆಪಿ ನಾಯಕರು ಮೊದಲು ಕೇಂದ್ರದ ಬಳಿ ಮಾತನಾಡಿ ಶೂರರಾಗಲಿ-ಸಚಿವ ದಿನೇಶ್ ಗುಂಡೂರಾವ್.

ಬೆಂಗಳೂರು,ಜೂನ್,28,2023(www.justkannada.in): ರಾಜ್ಯದ ಬಡವರಿಗೆ 10 ಕೆಜಿ ಅಕ್ಕಿ ನೀಡದಿದ್ದರೇ ಪ್ರತಿಭಟನೆ ಮಾಡುತ್ತೇವೆ ಎಂದಿರುವ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮೊದಲು ಕೇಂದ್ರ ಸರ್ಕಾರ ಜೊತೆ ಮಾತಾನಾಡಿ ಅಕ್ಕಿ ಕೊಡಿಸಲು ಹೇಳಿ ಎಂದರು.

ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ನಾಯಕರು ಇಲ್ಲಿ ಶೂರರಾಗಲು ಹೊರಟಿದ್ದಾರೆ. ಪ್ರತಿಭಟನೆ ಮಾಡುವುದಿದ್ದರೇ ಸಂಸತ್ ಭವನದ ಮುಂದೆ ಮಾಡಲಿ. ಕೇಂದ್ರ ಸರ್ಕಾರದ ಬಳಿ ಮಾತನಾಡಿ ಅಕ್ಕಿ ಕೊಡಿಸಿ ಶೂರರಾಗಲಿ ಎಂದು ವ್ಯಂಗ್ಯವಾಡಿದರು.

ಬಿಎಸ್ ವೈ ರಾಜಕೀಯದಿಂದ ನಿವೃತ್ತಿ ಆಗಿದ್ದಾರಲ್ಲಾ. ಬಿಸ್ ವೈರನ್ನ ಸಿಎಂಸ್ಥಾನದಿಂದ ಇಳಿಸಿ ಮೂಲೆಗುಂಪು ಮಾಡಿದ್ದಾರೆ . ಬಿಜೆಪಿ ನಾಯಕರು ವಿಕೃತ ಹೇಳಿಕೆ ನೀಡುವುದನ್ನ ಬಿಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣ ತನಿಖೆ ಮಾಡುತ್ತೇವೆ ಎಂದರು.ಬಿಜೆಪಿ ನಾಯಕರು ಮೊದಲು ಕೇಂದ್ರದ ಬಳಿ ಮಾತನಾಡಿ ಶೂರರಾಗಲಿ dinesh gundurao

ರಾಜ್ಯ ಸರ್ಕಾರದ ವಿರುದ್ದ ವರ್ಗಾವಣೆ ದಂಧೆ ಆರೋಪ ಮಾಡಿದ ಹೆಚ್.ಡಿಕೆ ವಿರುದ್ದ ಹರಿಹಾಯ್ದ ಸಚಿವ ದಿನೇಶ್ ಗುಂಡುರಾವ್,  ಪಾಪ ಹೆಚ್ಡಿಕೆಗೆ ಕೆಲಸ ಇಲ್ಲ ಇನ್ನೇನು ಮಾಡ್ತಾರೆ. ನಾವು ಒಳ್ಳೆಯ ಕೆಲಸ ಮಾಡಿದ್ದನ್ನು ಅವರಿಗೆ ಹೇಳೋಕೆ ಆಗ್ತಿಲ್ಲ. ಅದಕ್ಕೆ ಈ ರೀತಿ ಏನಾದರೂ ಒಂದು ಆರೋಪ ಮಾಡುತ್ತಾರೆ ಎಂದರು.

Key words: BJP -leaders – Center- first – rice-Minister-Dinesh Gundurao.