Friday, September 18, 2026

BDA Apartments

Home Front Page ವಿಶ್ವ ಆಹಾರ ಸುರಕ್ಷತಾ ದಿನ : ಮೈಸೂರು ಸಿಎಫ್ ಟಿಆರ್ ಐ ನಲ್ಲಿ ವಿದ್ಯಾರ್ಥಿಗಳಿಗೆ ಆಹಾರ...

ವಿಶ್ವ ಆಹಾರ ಸುರಕ್ಷತಾ ದಿನ : ಮೈಸೂರು ಸಿಎಫ್ ಟಿಆರ್ ಐ ನಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಸಂಸ್ಕರಣೆ, ಕಲಬೆರಕೆ ಬಗ್ಗೆ ಅರಿವು..

ಮೈಸೂರು,ಜೂನ್,7,2023(www.justkannada.in): ಇಂದು  ವಿಶ್ವ ಆಹಾರ ಸುರಕ್ಷತಾ ದಿನದ ಅಂಗವಾಗಿ  ಇಂದು ಮೈಸೂರಿನ ಸಿಎಫ್ ಟಿಆರ್ ಐ ನಲ್ಲಿ “ಆಹಾರ ಮಾನದಂಡಗಳು ಜೀವಗಳನ್ನು ಉಳಿಸುತ್ತವೆ” ಎಂಬ ವಿಷಯ ಆಧಾರಿತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಶ್ವ ಆಹಾರ ಸುರಕ್ಷತಾ ದಿನದ ಪ್ರಯುಕ್ತ ವಿಶ್ವದಾದ್ಯಂತ ಒಂದು ದಿನದ ಕಾರ್ಯಕ್ರಮ ನಡೆಯುತ್ತಿದ್ದು, ನಗರದ ವಿವಿಧ ಶಾಲೆಗಳಿಂದ ವಿಧ್ಯಾರ್ಥಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿಶ್ವ ಆಹಾರ ಸುರಕ್ಷತಾ ದಿನ cftri

ಸಿಎಫ್ ಟಿಆರ್ ಐನ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ವಿಧ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಆಹಾರ ಸಂಸ್ಕರಣೆ, ಕಲಬೆರಕೆ ಹಾಗೂ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ವಿಶೇಷವಾಗಿ ಜೇನುತುಪ್ಪ ಕಲಬೆರಕೆ ತಡೆಗಟ್ಟಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು , ರೈತರು ತಮ್ಮ ಹೊಲಗಳಲ್ಲಿ ಬಳಸುತ್ತಿರುವ ಕಳಪೆ ಗುಣಮಟ್ಟದ ರಸಾಯನಿಕಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.

Key words: World -Food -Safety –Day-Students-CFTRI