Sunday, August 23, 2026

BDA Apartments

Home Front Page ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು- ಡಾ.ಜಿ.ಪರಮೇಶ್ವರ್ ಆಗ್ರಹ .

ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು- ಡಾ.ಜಿ.ಪರಮೇಶ್ವರ್ ಆಗ್ರಹ .

ಬೆಂಗಳೂರು,ಮೇ,18,2023(www.justkannada.in): ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕೆಂಬುದು ಸೂಕ್ತ ಅಲ್ಲ. ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು ಎಂದು ಮಾಜಿ ಡಿಸಿಎಮ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.

ಅಧಿಕೃತವಾಗಿ ಸರ್ಕಾರ ರಚನೆಗೆ ಕಾಂಗ್ರೆಸ್ ಮುಂದಾಗಿದ್ದು, ರಾಜಭವನದಲ್ಲಿ ಡಾ.ಜಿ.ಪರಮೇಶ್ವರ್ ಇಂದು  ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಯಾಗಿ ರಾಜ್ಯಪಾಲರನ್ನ ಭೇಟಿಯಾಗಿ ಮೇ 20ರಂದು  ಪದಗ್ರಹಣಕ್ಕೆ ದಿನಾಂಕ ನಿಗದಿ ಮಾಡುವಂತೆ ಮನವಿ ಪತ್ರ ನೀಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಎಲ್ಲರ ನಾಯಕತ್ವದಿಂದ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ಬಂದಿದೆ. ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕೆಂಬುದು ಸೂಕ್ತ ಅಲ್ಲ. ಎಲ್ಲ ಸಮುದಾಯಗಳನ್ನು ಪರಿಗಣಿಸಿ ಡಿಸಿಎಂ ಸ್ಥಾನ ಕೊಡಲಿ. ನಾನೂ ಕೂಡ ಡಿಸಿಎಂ ಆಗಿದ್ದವನು ಎಂದು ಹೇಳಿದರು.

Key words: give-post – DCM-  Dr. G. Parameshwar