Sunday, August 23, 2026

BDA Apartments

Home Front Page  ಸಿಎಂ ಆಗಿ ಆಯ್ಕೆಯಾದ ಬೆನ್ನಲ್ಲೆ ಟ್ವೀಟ್ ಮಾಡಿ ಭರವಸೆ ಕೊಟ್ಟ ಸಿದ್ದರಾಮಯ್ಯ.

 ಸಿಎಂ ಆಗಿ ಆಯ್ಕೆಯಾದ ಬೆನ್ನಲ್ಲೆ ಟ್ವೀಟ್ ಮಾಡಿ ಭರವಸೆ ಕೊಟ್ಟ ಸಿದ್ದರಾಮಯ್ಯ.

ನವದೆಹಲಿ,ಮೇ,18,2023(www.justkannada.in):  ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೆ ಸಿದ್ಧರಾಮಯ್ಯ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

.ಕನ್ನಡಿಗರ ಹಿತರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜೊತೆಗೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲು ಕೆಲಸ ಮಾಡ್ತೇವೆ. ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದು ಟ್ವೀಟ್ ಮೂಲಕ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.

ಸಿಎಂ ಆಗಿ ಘೋಷಣೆ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ  ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್  ಏನು ಹೇಳಿದೆಯೋ ಅದೇ ನನ್ನ ನಿರ್ಧಾರ ಎಂದಿದ್ದಾರೆ.

Key words: Our – protection – Kannadiga – Siddaramaiah- tweet – elected -CM.