Sunday, September 20, 2026

BDA Apartments

ಮೋದಿ ಮುಖ ನೋಡಿ ವೋಟ್ ಹಾಕ್ತಾರೆ ಅನ್ನೋದು ಭ್ರಮೆ- ಮಾಜಿ ಸಿಎಂ ಹೆಚ್.ಡಿಕೆ ವ್ಯಂ...
Home Front Page ಮೋದಿ ಮುಖ ನೋಡಿ ವೋಟ್ ಹಾಕ್ತಾರೆ ಅನ್ನೋದು ಭ್ರಮೆ- ಮಾಜಿ ಸಿಎಂ ಹೆಚ್.ಡಿಕೆ ವ್ಯಂಗ್ಯ.

ಮೋದಿ ಮುಖ ನೋಡಿ ವೋಟ್ ಹಾಕ್ತಾರೆ ಅನ್ನೋದು ಭ್ರಮೆ- ಮಾಜಿ ಸಿಎಂ ಹೆಚ್.ಡಿಕೆ ವ್ಯಂಗ್ಯ.

ಬೆಂಗಳೂರು,ಏಪ್ರಿಲ್,29,2023(www.justkannada.in): ಪ್ರಧಾನಿ ಮೋದಿ ಮುಖ ನೋಡಿ ವೋಟ್ ಹಾಕಿ ಎಂಬ ಬಿಜೆಪಿ ನಾಯಕರ ಮನವಿ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮೋದಿ  ಮುಖ ನೋಡಿ ವೋಟ್ ಹಾಕ್ತಾರೆ ಅನ್ನೋದು ಭ್ರಮೆ. ಯಾವ ರೀತಿ ವರ್ಕೌಟ್ ಆಗುತ್ತೆ ಎಂದು ನೋಡೋಣ. ಮೋದಿ ಸಮಾವೇಶಕ್ಕೆ ಜನ ಸೇರುತ್ತಿಲ್ಲ. ಹೀಗಾಗಿ ಮೋದಿ ಪ್ರಚಾರಕ್ಕೆ 20 ಕ್ಷೇತ್ರಗಳಿಂದ ಜನರನ್ನ  ಪ್ರಚಾರ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಮನಗರ ಜಿಲ್ಲೆ ಚನ್ನಪಟ್ಟಣಕ್ಕೆ  ಪ್ರಧಾನಿ ಮೋದಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ,  ಚನ್ನಪಟ್ಟಣಕ್ಕೆ  ಮೋದಿ ಬಂದರೆ ತಪ್ಪೇನಿಲ್ಲ. ಮೋದಿ ಬಂದರೆ ಸಂತಸ. ಕ್ಷೇತ್ರವನ್ನ ನೋಢಿಕೊಂಡು ಹೋಗಲಿ ಎಂದರು.

Key words: PM-Modi- face – voting – former CM- HD kumaraswamy