Friday, August 7, 2026

BDA Apartments

Home Front Page ಯೂಸ್ ಅಂಡ್ ಥ್ರೋ ಕಾಂಗ್ರೆಸ್ ಸಂಸ್ಕೃತಿ: ಎಲ್ಲಾ ಗೊತ್ತಿದ್ದೂ ಶೆಟ್ಟರ್ ಯಾಕೆ ಹೋದ್ರೋ ಗೊತ್ತಿಲ್ಲ- ಸಿಎಂ...

ಯೂಸ್ ಅಂಡ್ ಥ್ರೋ ಕಾಂಗ್ರೆಸ್ ಸಂಸ್ಕೃತಿ: ಎಲ್ಲಾ ಗೊತ್ತಿದ್ದೂ ಶೆಟ್ಟರ್ ಯಾಕೆ ಹೋದ್ರೋ ಗೊತ್ತಿಲ್ಲ- ಸಿಎಂ ಬೊಮ್ಮಾಯಿ ಬೇಸರ.

ಬೆಂಗಳೂರು,ಏಪ್ರಿಲ್,17,2023(www.justkannada.in):  ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಜಗದೀಶ್ ಶೆಟ್ಟರ್ ಅವರನ್ನ ಬಿಜೆಪಿ ಗೌರವಯುತವಾಗಿ ಕಂಡಿದೆ. ಶೆಟ್ಟರ್ ರನ್ನು ಕಡೆಗಣಿಸಿದ್ದಾರೆ ಪ್ರಶ್ನೆಯೇ ಎನ್ನುವುದಿಲ್ಲ. ಎಲ್ಲಾ ಬೆಳವಣಿಗೆ ಹೈಕಮಾಂಡ್ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಸಂಸ್ಕೃತಿ ಯೂಸ್ ಅಂಡ್ ಥ್ರೋ.  ಚುನಾವಣೆ ಮುಗಿಯುವವರೆಗೂ ಮಾತ್ರ ಇವರಿಗೆ ಸನ್ಮಾನ. ಚುನಾವಣೆ ಮುಗಿದ ಬಳಿಕ ಇಲ್ಲಿಂದ ಹೋದವರಿಗೆ ಅವಮಾನ ಎಂದು ಟೀಕಿಸಿದರು.

ಡಿ.ದೇವರಾಜ ಅರಸು, ವೀರೇಂದ್ರ ಪಾಟೀಲ್ ಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಎಲ್ಲಾ ಗೊತ್ತಿದ್ದು ಜಗದೀಶ್ ಶೆಟ್ಟರ್ ಯಾಕೆ ಕಾಂಗ್ರೆಸ್ ಗೆ ಹೋದರು ಗೊತ್ತಿಲ್ಲ. ಶೆಟ್ಟರ್ ರನ್ನ ಬಿಹೆಪಿ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Use and throw -Congress –culture- Jagadish Shettar – CM Bommai