Tuesday, September 22, 2026

BDA Apartments

ಹವಾಮಾನ ವೈಪರಿತ್ಯ ಹಿನ್ನೆಲೆ: ಕೆಂಪೇಗೌಡ ಏರ್ ಪೋರ್ಟ್ ಗೆ ಆಗಮಿಸಬೇಕಾಗಿದ್ದ ವ...
Home Front Page ಹವಾಮಾನ ವೈಪರಿತ್ಯ ಹಿನ್ನೆಲೆ: ಕೆಂಪೇಗೌಡ ಏರ್ ಪೋರ್ಟ್ ಗೆ ಆಗಮಿಸಬೇಕಾಗಿದ್ದ ವಿಮಾನಗಳು ಬೇರೆ ಕಡೆಗೆ ಡೈವರ್ಟ್

ಹವಾಮಾನ ವೈಪರಿತ್ಯ ಹಿನ್ನೆಲೆ: ಕೆಂಪೇಗೌಡ ಏರ್ ಪೋರ್ಟ್ ಗೆ ಆಗಮಿಸಬೇಕಾಗಿದ್ದ ವಿಮಾನಗಳು ಬೇರೆ ಕಡೆಗೆ ಡೈವರ್ಟ್

ಬೆಂಗಳೂರು,ಏಪ್ರಿಲ್,5,2023(www.justkannada.in): ಹವಾಮಾನ ವೈಪರಿತ್ಯ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗಿದ್ದ ವಿಮಾನಗಳನ್ನ ಬೇರೆ ಕಡೆಗೆ ಡೈವರ್ಟ್ ಮಾಡಲಾಗಿದೆ.

ನಿನ್ನೆ ಬೆಂಗಳೂರಿನ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ.  ಈ ನಡುವೆ ದೇವನಹಳ್ಳಿಯಲ್ಲೂ ವರುಣ ಅಬ್ಬರಿಸಿದ ಹಿನ್ನೆಲೆ ರಸ್ತೆಯ ತುಂಬೆಲ್ಲಾ ನೀರು ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಮಳೆ ಸುರಿದ  ಹಿನ್ನೆಲೆ ಬೆಂಗಳೂರಿಗೆ ಬರಬೇಕಾಗಿದ್ದ ಸುಮಾರು 10 ವಿಮಾನಗಳನ್ನ ಬೇರೆ ಕಡೆಗೆ ಡೈವರ್ಟ್ ಮಾಡಲಾಗಿದೆ.ಹವಾಮಾನ ವೈಪರಿತ್ಯ ಹಿನ್ನೆಲೆ bangalore

ದೆಹಲಿ ಮುಂಬೈನಿಂದ ವಿಮಾನಗನ್ನ ಬರುತ್ತಿದ್ದ ಚೆನ್ನೈ ಕೊಯಂಬತ್ತೂರು ಹೈದರಾಬಾದ್ ನತ್ತ ಡೈವರ್ಟ್ ಮಾಡಲಾಗಿದೆ ಎನ್ನಲಾಗಿದೆ.

Key words: Bad -weather -Flights – Kempegowda Airport -diverted