Tuesday, August 18, 2026

BDA Apartments

Home Front Page ಮತದಾರರಿಗೆ ಹಂಚಲು ತಂದಿದ್ದ ಡಿನ್ನರ್ ಸೆಟ್ ಚುನಾವಣಾಧಿಕಾರಿಗಳ ವಶಕ್ಕೆ.

ಮತದಾರರಿಗೆ ಹಂಚಲು ತಂದಿದ್ದ ಡಿನ್ನರ್ ಸೆಟ್ ಚುನಾವಣಾಧಿಕಾರಿಗಳ ವಶಕ್ಕೆ.

ರಾಮನಗರ,ಏಪ್ರಿಲ್,5,2023(www.justkannada.in):  ಮತದಾರರಿಗೆ ಹಂಚಲು ತಂದಿದ್ದ ಡಿನ್ನರ್ ಸೆಟ್ ಅನ್ನ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ರಾಮನಗರ ತಾಲೂಕಿನ ಚಿಕ್ಕ ಸೂಲಿಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸತೀಶ್ ಎಂಬುವರ ಮನೆಯಲ್ಲಿ ಎಂಬತ್ತಕ್ಕೂ ಹೆಚ್ಚು ಡಿನ್ನರ್ ಸೆಟ್ ಪತ್ತೆಯಾಗಿದ್ದವು. ಡಿನ್ನರ್ ಸೆಟ್ ಅನ್ನು ಚಿಕ್ಕ ಸೋಲಿಕೆರೆ ಗ್ರಾಮದ ಮತದಾರರಿಗೆ ಹಂಚಲು ಇಡಲಾಗಿತ್ತು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಸೇರಿದ್ದು ಎನ್ನಲಾದ ಡಿನ್ನರ್ ಸೆಟ್ ಅನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: dinner set – seized – Election- Officers.