Monday, September 14, 2026

BDA Apartments

ಇಂಧನ ಖಾತೆಗೆ ಮನವಿ ನಾಯಕರ ಬಳಿ ಮನವಿ ಮಾಡಿದ್ದೇನೆ- ಸಚಿವ ಹೆಚ್. ನಾಗೇಶ್ BDA JK_Adv BDA Adv
Home Front Page ಇಂಧನ ಖಾತೆಗೆ ಮನವಿ ನಾಯಕರ ಬಳಿ ಮನವಿ ಮಾಡಿದ್ದೇನೆ- ಸಚಿವ ಹೆಚ್. ನಾಗೇಶ್

ಇಂಧನ ಖಾತೆಗೆ ಮನವಿ ನಾಯಕರ ಬಳಿ ಮನವಿ ಮಾಡಿದ್ದೇನೆ- ಸಚಿವ ಹೆಚ್. ನಾಗೇಶ್

ಕೋಲಾರ,ಆ,24,2019(www.justkannada.in):  ಸಚಿವ ಸಂಪುಟ ರಚನೆ ನಂತರ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಬಗ್ಗೆ ಸಂಕಷ್ಟಕ್ಕೆ ಸಿಲುಕಿದ್ದು ಇದೀಗ ಇಂಧನ ಖಾತೆ ನೀಡುವಂತೆ ಸಚಿವ ಹೆಚ್. ನಾಗೇಶ್ ಮನವಿ ಮಾಡಿದ್ದಾರಂತೆ.

ಹೌದು, ಈ ಬಗ್ಗೆ ಸ್ವತಃ ಸಚಿವ ಹೆಚ್. ನಾಗೇಶ್ ಅವರೇ ಹೇಳಿಕೆ ನೀಡಿದ್ದಾರೆ. ನನಗೆ ಇಂಧನ ಖಾತೆ ನೀಡುವಂತೆ ಬಿಜೆಪಿ ನಾಯಕರ ಬಳಿ ಮನವಿ ಮಾಡಿದ್ದೇನೆ. ಇಂಧನ ಖಾತೆ ಸಿಗುವ ವಿಶ್ವಾವಿದೆ ಎಂದು ಸಚಿವ ಹೆಚ್.ನಾಗೇಶ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಹೆಚ್,ನಾಗೇಶ್, ಶೀಘ್ರದಲ್ಲೇ ನಾನು, ಕೊತ್ತೂರು ಮಂಜುನಾಥ್,ಎಂ.ಸಿ ಸುಧಾಕರ್ ಬಿಜೆಪಿಗೆ ಸೇರ್ಪಡೆಯಾಗುತ್ತೇವೆ. ನನಗೆ ಇಂಧನ ಖಾತೆ ನೀಡುವಂತೆ ಮನವಿ ಮಾಡಿದ್ದೇನೆ. ಹೀಗಾಗಿ ನಾನು ಇಷ್ಟಪಟ್ಟಿರುವ ಖಾತೆಯೇ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಖಚಿತ…

ಇನ್ನು ಬಿಜೆಪಿ ಸರ್ಕಾರದಲ್ಲಿ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಸಿಗೋದು ಖಚಿತ. ಅದಕ್ಕಾಗಿಯೇ ಅರ್ಧದಷ್ಟು ಸಚಿವ ಸ್ಥಾನಗಳನ್ನ ಉಳಿಸಿಕೊಳ್ಳಲಾಗಿದೆ ಎಂದು ಸಚಿವ ಹೆಚ್. ನಾಗೇಶ್ ಸ್ಪಷ್ಟಪಡಿಸಿದ್ದಾರೆ.

Key words: appealed – leaders – request – Energy Department – Minister- H. Nagesh