Wednesday, July 29, 2026

BDA Apartments

Home Front Page ಸಿಎಂ ಬಿಎಸ್ ವೈ ಎದುರೇ ಶಾಸಕ ಉಮೇಶ್ ಕತ್ತಿ ಮತ್ತು ಸಚಿವ ಲಕ್ಷ್ಮಣ್ ಸವದಿ ಜಟಾಪಟಿ…

ಸಿಎಂ ಬಿಎಸ್ ವೈ ಎದುರೇ ಶಾಸಕ ಉಮೇಶ್ ಕತ್ತಿ ಮತ್ತು ಸಚಿವ ಲಕ್ಷ್ಮಣ್ ಸವದಿ ಜಟಾಪಟಿ…

ಬೆಂಗಳೂರು,ಆ,24,2019(www.justkannada.in): ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕ ಉಮೇಶ್ ಕತ್ತಿ ಮತ್ತು ಸಚಿವ ಲಕ್ಷ್ಮಣ ಸವದಿ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಎದುರೇ ಜಟಾಪಟಿಯಾಗಿರುವ ಘಟನೆ ನಡೆದಿದೆ.

ಸೋತಿರುವ  ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ಸಿಕ್ಕಿ ತನಗೆ ಮಿಸ್ ಆಗಿದ್ದಕ್ಕೆ ಶಾಸಕ ಉಮೇಶ್ ಕತ್ತಿ ಬೇಸರಗೊಂಡಿದ್ದು ಈ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ಇಬ್ಬರ ನಡುವೆ ಸಂದಾನಕ್ಕೆ ಯತ್ನಿಸಿದ್ದರು. ಉಮೇಶ್ ಕತ್ತಿ – ಸವದಿ ಇಬ್ಬರನ್ನೂ ಎದುರಾಬದುರು ಕೂರಿಸಿ ಸಿಎಂ ಮಾತುಕತೆ ನಡೆಸಿದ್ದರು.

ಈ ವೇಳೆ ಇಬ್ಬರ ನಡುವೆ ಜಟಾಪಟಿ ನಡೆದಿದೆ. ಪರಸ್ಪರ ಲಕ್ಷ್ಮಣ್ ಸವದಿ ಮತ್ತು ಕತ್ತಿ ಜೋರು ಮಾತುಗಳಿಂದ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಕತ್ತಿಗೆ ಸಚಿವ ಸ್ಥಾನ ತಪ್ಪಿಸಿರುವ ಬಗ್ಗೆ ನನಗೆ ಸಂಬಂಧಸಿಲ್ಲ. ಹೈಕಮಾಂಡ್ ನನ್ನ ಕೆಲಸ ಗುರುತಿಸಿ ಮಂತ್ರಿ ಮಾಡಿದ್ದಾರೆ ನನ್ನ ವಿಚಾರಕ್ಕೆ ಯಾಕ್ ಬರ್ತೀರ ಎಂದು ಉಮೇಶ್ ಕತ್ತಿಗೆ ಲಕ್ಷ್ಮಣ್ ಸವದಿ ಕೇಳಿದ್ದಾರೆ

ಸವದಿ ಮಾತಿನಿಂದ ಸಿಟ್ಟಾದ ಉಮೇಶ್ ಕತ್ತಿ, ಎಲ್ಲ ನಿನ್ನಿಂದಲೇ ಆಗಿದ್ದು. ಹೈಕಮಾಂಡ್ ನಲ್ಲಿ ಲಾಬಿ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದೀ. ನಿನ್ನ ಹಾಗೆ ಇನ್ನೊಬ್ಬರ ಶಿಫಾರಸ್ಸಿನ ಮಂತ್ರಿಗಿರಿ ನಾನು ಕೇಳಲ್ಲ ಎಂದು  ಸಿಟ್ಟಿನಲ್ಲಿ ಹೇಳಿದರು. ಈ ವೇಳೆ ಇಬ್ಬರನ್ನೂ ಸಮಾಧಾನ ಮಾಡಲು ಸಿಎಂ ಬಿಎಸ್ ವೈ ಹೈರಾಣಾದರು ಎನ್ನಲಾಗಿದೆ. ಕೊನೆಗೆ ಏನಾದ್ರೂ ಮಾಡಿಕೊಳ್ಳಿ ನನ್ನ ದಾರಿ ನನಗೆ ಎಂದು ಉಮೇಶ್ ಕತ್ತಿ ಬಿಎಸ್ ವೈ ನಿವಾಸದಿಂದ ಹೊರಟರು ಎಂದು ಹೇಳಲಾಗುತ್ತಿದೆ.

Key words: Umesh katti- Minister-Laxman Sawadi – uproar-CM bs yeddyurappa