Sunday, August 23, 2026

BDA Apartments

Home Front Page ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಘೋಷಿಸಿಕೊಂಡ ಮಾಜಿ ಸಚಿವ ಎ. ಮಂಜು.

ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಘೋಷಿಸಿಕೊಂಡ ಮಾಜಿ ಸಚಿವ ಎ. ಮಂಜು.

ಹಾಸನ,ಮಾರ್ಚ್,7,2023(www.justkannada.in): ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆಯಾಗುವುದು ಬಹುತೇಕ ಖಚಿತವಾದಂತೆ ಕಾಣುತ್ತಿದೆ. ಹೌದು ಅರಕಲಗೂಡು ಕ್ಷೇತ್ರದ  ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಎ. ಮಂಜು ಘೋಷಣೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹನ್ಯಾಳು ಗ್ರಾಮದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಎ.ಮಂಜು ಈ ರೀತಿ ಘೋಷಣೆ ಮಾಡಿಕೊಂಡಿದ್ದಾರೆ.

ಹನ್ಯಾಳು ಗ್ರಾಮದಲ್ಲಿ ಎ. ಮಂಜು ಬೆಂಬಲಿಗರ ಸಭೆ ಕರೆದಿದ್ದರು.  ಸಭೆಯಲ್ಲಿ ಮಾತನಾಡಿರುವ ಎ.ಮಂಜು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.  ಬಳಿಕ ಬೆಂಬಲಿಗರು ಕಾರ್ಯಕರ್ತರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಸೇರಿ ಎಂ ಮಂಜು ಗೆಲ್ಲಸುವ ಜವಾಬ್ದಾರಿ ನಿಮ್ಮದು. ಇನ್ಮುಂದೆ ನಾವು ಜೆಡಿಎಸ್ ಎಂದು ಹೇಳಿದ್ದಾರೆ. ಅಲ್ಲದೆ ಬೆಂಬಲಿಗರಿಂದ ಹೆಚ್.ಡಿ ದೇವೇಗೌಡರು,  ಹೆಚ್.ಡಿ ಕುಮಾರಸ್ವಾಮಿ ಪರ ಘೋಷಣೆ ಕೂಗಿಸಿದ್ದಾರೆ.

Key words: Former Minister –A.Manju- announced-himself – JDS candidate