Thursday, August 13, 2026

BDA Apartments

Home Cinema ‘ಕಾವೇರಿ ಕಾಲಿಂಗ್’ ಅಭಿಯಾನಕ್ಕೆ ಕಾಜಲ್ ಸಾಥ್

‘ಕಾವೇರಿ ಕಾಲಿಂಗ್’ ಅಭಿಯಾನಕ್ಕೆ ಕಾಜಲ್ ಸಾಥ್

ಬೆಂಗಳೂರು, ಆಗಸ್ಟ್ 23, 2019 (www.justkannada.in): ಇಷಾ ಫೌಂಡೇಷನ್ ವತಿಯಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನದ ಮೂಲಕ ಕಾವೇರಿ ನದಿ ನೀರಿನ ಮಟ್ಟವನ್ನು ಹೆಚ್ಚಿಸಲು ‘ಕಾವೇರಿ ಕಾಲಿಂಗ್’ ಅಥವಾ ‘ಕಾವೇರಿ ಕೂಗು’ ಎಂಬ ಅಭಿಯಾನವೊಂದು ಶುರುವಾಗಿದೆ.

ಇನ್ನು ಸದ್ಗುರು ಜಗ್ಗಿ ವಾಸುದೇವ್ ಸಹಈ ಕಾರ್ಯಕ್ಕೆ ಈಗಾಗಲೇ ಭಾಗಿಯಾಗಿದ್ದಾರೆ.
‘ಕಾವೇರಿ ಕೂಗು’ ಅಭಿಯಾನ ಸೆ.3 ರಿಂದ ಚಾಲನೆ ಪಡೆಯಲಿದೆ.

ಇದರ ಜೊತೆಗೆ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಕೂಡ ಈ ಅಭಿಯಾನದಲ್ಲಿ ಕೈಜೋಡಿಸಬಹುದಾಗಿದೆ. ಇದಕ್ಕೆ ಸಾಕಷ್ಟು ನಟ ನಟಿಯರೂ ಕೈ ಜೋಡಿದ್ದು, ನಟಿ ಕಾಜಲ್ ಅಗರ್ ವಾಲ್ ಕೂಡ ಸಾಥ್ ನೀಡಿದ್ದಾರೆ.