ಸರ್ಕಾರ ಬೀಳಿಸೊದ್ರದಲ್ಲಿ ನಿಪುಣರು: ಮೈತ್ರಿ ಸರ್ಕಾರದ ಪತನಕ್ಕೆ ಅವರೇ ಕಾರಣ -ಹೆಚ್.ಡಿ ದೇವೇಗೌಡರ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು…

ಬೆಂಗಳೂರು,ಆ,21,2019(www.justkannada.in): ನನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯನೇ ಕಾರಣ ಎಂದು ಆರೋಪಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಮಾಜಿ ಸಿಎಂ ಸಿದ್ದರಾಮಯ್ಯ  ತಿರುಗೇಟು ನೀಡಿದ್ದಾರೆ.

ನನ್ನ ವಿರುದ್ದ ಹೆಚ್.ಡಿ ದೇವೇಗೌಡರು ಮಾಡಿರುವ ಆರೋಪಗಳೆಲ್ಲಾ ಸುಳ್ಳು. ಸತ್ಯಕ್ಕೆ ದೂರವಾದದ್ದು. ರಾಜ್ಯ ಸಮ್ಮಿಶ್ರ ಸರ್ಕಾರ ಬೀಳಲು ಏಕಪಕ್ಷೀಯ ನಿರ್ಧಾರ ಮತ್ತು ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಕಾರಣ. ಮೈತ್ರಿ ಸರ್ಕಾರದ ಪತನಕ್ಕೆ ಅವರೇ ಕಾರಣರೇ ಹೊರತು ನಾನಲ್ಲ ಎಂದು ಹೆಚ್.ಡಿ ದೇವೇಗೌಡರ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೆಚ್.ಡಿ ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್.ಡಿ ದೇವೇಗೌಡರು ನನ್ನ ವಿರುದ್ದ ಆರೋಪ ಮಾಡಿದ್ದಾರೆ. ಗಂಭೀರ ಸ್ವರೂಪದ ಆರೋಪ ಮಾಢಿದ್ದಾರೆ. ನಾನು ಸುಮ್ಮನಿದ್ದರೇ ಜನರು ಅದಕ್ಕೆ ಭೇರೆ ಅರ್ಥ ನೀಡುತ್ತಾರೆ. ಹೀಗಾಗಿ ನಾನು ಪ್ರತಿಕ್ರಿಯೆ ರೂಪದಲ್ಲಿ ಉತ್ತರಿಸುತ್ತಿದ್ದೇನೆ.  ಅವರು ರಾಜಕೀಯ ದುರುದ್ದೇಶದಿಂದ ಆರೋಪ ಮಾಡಿದ್ದಾರೆ. ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು.  ನನಗೆ ಅವರಿಗೆ ರಾಜಕೀಯ ವೈರತ್ವ ಎಂದು ತಿಳಿಸಿದ್ದಾರೆ . ಆದ್ರೆ ನನಗೆ ಹಾಗೆ ಭಾವಿಸಿಲ್ಲ. ಹೆಚ್.ಡಿಕೆ ಸಿಎಂ ಆಗಿದ್ದನ್ನ ಸಹಿಸಿಕೊಂಡಿಲ್ಲ ಎಂದಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಒಪ್ಪಿದ್ದೆ.  ನಾನು ಅವರ ಕೆಲಸದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. 14 ತಿಂಗಳ ಕಾಲ ನಾನು ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೆ ಎಂದು ಸ್ಪಷ್ಟನೆ ನೀಡಿದರು.

ದೇಶದಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿದೆ. ಪ್ರಜಾಪ್ರಭುತ್ವ ನಾಶ ಮಾಡಲು ಬಿಜೆಪಿ ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿಂದು ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಸಂವಿಧಾನಾತ್ಮಕ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನ ಎಲ್ಲಾ ಪಕ್ಷಗಳೂ ಸೇರಿ ವಿರೋಧಿಸಬೇಕಿದೆ.  ಒಟ್ಟಾಗಿ ಜಾತ್ಯಾತೀತವಾಗಿ ಹೋರಾಟ ಮಾಡಬೇಕಿದೆ ಎಂದರು.

ಏಕಪಕ್ಷೀಯ ನಿರ್ಧಾರ ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣ…

ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿಎಂ ಆಗಿದ್ದ ಹೆಚ್.ಡಿಕೆ  ರೇವಣ್ಣ ದೇವೇಗೌಡ ಕಾರಣ ಅಂತಾ ಶಾಸಕರು ಹೇಳಿದ್ದಾರೆ. ಶಾಸಕರ ಕೆಲಸ ಮಾಡಿಕೊಟ್ಟಿದ್ದರೇಯಾವ ಶಾಸಕರೂ ಅಸಮಾಧಾನಗೊಳುತ್ತಿರಲಿಲ್ಲ. ಏಕಪಕ್ಷೀಯ ನಿರ್ಧಾರ ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಇದೇ ಸಮ್ಮಿಶ್ರ ಸರ್ಕಾರಕ್ಕೆ ಕಾರಣ ಮತ್ತೇನು ಇಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿ 5ರಿಂದ 6 ಬಾರಿ ಸಭೆ ನಡೆಸಿದ್ದೆ. ಆದರೆ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನ ಜಾರಿಗೆ ತರಲಿಲ್ಲ. ಸಭೆಯಲ್ಲಿ ಒಪ್ಪಿಕೊಳ್ಳುತ್ತಿದ್ದರು ಜಾರಿ ಮಾಡಲಿಲ್ಲ. ಇದನ್ನ ನಾನು ಎಲ್ಲಿಯೂ ಹೇಳಿರಲಿಲ್ಲ. ಸರ್ಕಾರ ಉಳಿಸಿಕೊಳ್ಳಲು ಬಾರಿ ಪ್ರಯತ್ನಿಸಿದವು. ಆದರೆ ಆಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರ ಕೆಡವೋದ್ರಲ್ಲಿ ದೇವೇಗೌಡ್ರು ನಿಪುಣರು..

ಸರ್ಕಾರವನ್ನ ಬೀಳಿಸುವಂತಹ ನೀಚ ರಾಜಕಾರಣ ನಾನು ಮಾಡಲ್ಲ. ನಾನು ಅಧಿಕಾರದ ಹಿಂದೆ ಬಿದ್ದಿಲ್ಲ. ಅದೇನಿದ್ದರೂ ದೇವೇಗೌಡರು ಅವರ ಮಕ್ಕಳ ಹುಟ್ಟುಗುಣ.  ಸರ್ಕಾರ ಕೆಡವೋದ್ರಲ್ಲಿ ದೇವೇಗೌಡ್ರು ನಿಪುಣರು . ಧರಂ ಸಿಂಗ್ ಸರ್ಕಾರವನ್ನ ಬೀಳಿಸಿದವರು ಯಾರು..? ಬೊಮ್ಮಾಯಿ ಸರ್ಕಾರ ಬೀಳಿಸಿದವರು ಯಾರು..? ಇತಿಹಾಸ ಕೆದಕಿದ್ರೆ ಯಾರು ಏನ್ ಮಾಡಿದ್ರು ಎಲ್ಲ ಬಣ್ಣ ಬಯಲಾಗುತ್ತೆ ಎಂದು ಹೆಚ್.ಡಿ ದೇವೇಗೌಡರಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.

ಸಿದ್ದರಾಮಯ್ಯ. ಧರ್ಮ ಸಿಂಗ್ ಸರ್ಕಾರ ತೆಗೆದು ಬಿಜೆಪಿ ಜತೆ ಕುಮಾರಸ್ವಾಮಿ ಕೈಜೋಡಿಸಲು ದೇವೇಗೌಡ ಕಾರಣ. ಯಡಿಯೂರಪ್ಪ ಗೆ ಸಿಎಂ ಹುದ್ದೆ ನೀಡದೆ ವಚನ ಭ್ರಷ್ಟ ರಾದವರು ದೇವೇಗೌಡ, ಕುಮಾರಸ್ವಾಮಿ.

ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಜೆಡಿಎಸ್ ನವರೇ ಕಾರಣ. ಜೆಡಿಎಸ್ ನವರ ತಂತ್ರ ಕುತಂತ್ರವೆಲ್ಲವೂ ನನಗೆ ಗೊತ್ತಿದೆ.ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತಾರೋ ಅ ಪಕ್ಷಕ್ಕೆ ಮೋಸಮಾಡುವುದು ಹೆಚ್.ಡಿಡಿ ಜಾಯಮಾನವಾಗಿದೆ.

ಹಾಸನದಲ್ಲಿ ಅವರ ಮೊಮ್ಮಗ ಗೆದ್ದಿಲ್ಲವಾ..?

ಲೋಕಸಭೆ ಚುನಾವಣೆಯಲ್ಲಿ ಪ್ರೆಂಡ್ಲಿ ಫೈಟ್ ಬಗ್ಗೆ ಹೈಕಮಾಂಡ್ ಗೆ ಹೇಳಿದ್ದೆ. ಆದರೆ ಮೈತ್ರಿಯಲ್ಲಿ ಹೋಗುವಂತೆ ಹೈಕಮಾಂಡ್ ಸೂಚಿಸಿತ್ತು. ಹೀಗಾಗಿ ಮೈತ್ರಿಯಲ್ಲಿ ಚುನಾವಣೆ ಎದುರಿಸಿದ್ದವು. ಮಂಡ್ಯದಲ್ಲಿ ನಾವೆಲ್ಲರೂ ಒಟ್ಟಿಗೆ ಪ್ರಚಾರ ಮಾಡಿದ್ದೇವೆ. ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡಿದ್ದೇವೆ. ಆದರೂ ಮೊಮ್ಮಗನ ಸೋಲಿಗೆ ನಾನೇ ಕಾರಣ ಅಂತಾ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ. ಆಗಾದ್ರೆ ಹಾಸನದಲ್ಲಿ ಪ್ರಚಾರ ಮಾಡಿದ್ದವು. ಹಾಸನದಲ್ಲಿ ಅವರ ಮೊಮ್ಮಗ ಗೆದ್ದಿಲ್ಲವಾ..? ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಕಾರಣನಾ…? ಸಿಂಪಥಿಗಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದು ದೇವೇಗೌಡರ ಕೆಲಸ. ಇಲ್ಲಸಲ್ಲದ್ದನ್ನ ಹೇಳಿ ಅಮೇಲೆ ಅಳೋದು ಅದು ದೇವೇಗೌಡರ ಹಳೆ ಟ್ರಿಕ್ಸ್ ಎಂದು ಲೇವಡಿ ಮಾಡಿದರು.

ದೇವೇಗೌಡರು ತಮ್ಮ ಕುಟುಂಬವನ್ನ ಬಿಟ್ಟು ಬೇರೆ ಯಾರನ್ನು ಬೆಳೆಸಲ್ಲ. ಸ್ವಜಾತಿ ಸ್ವಪಕ್ಷದವರನ್ನೇ ಬೆಳೆಸಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

Key words: responsible – fall – alliance government-Former CM Siddaramaiah  -HD Deve Gowda