Saturday, August 22, 2026

BDA Apartments

Home Crime ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮುಡಾ ತಹಶೀಲ್ದಾರ್  ಮತ್ತು...

ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮುಡಾ ತಹಶೀಲ್ದಾರ್  ಮತ್ತು ಸಿಬ್ಬಂದಿ.

ಮೈಸೂರು,ಡಿಸೆಂಬರ್,23,2022(www.justkannada.in):  ನಿವೇಶನ ಖಾತೆ ಮಾಡಿಕೊಡಲು 14 ಸಾವಿರ ಲಂಚ ಪಡೆದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್, ಎಫ್ ಡಿಎ ಹಾಗೂ ಅಟೆಂಡರ್  ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮುಡಾ ತಹಶೀಲ್ದಾರ್, ಬಿ.ಕೆ.ಶ್ರೀನಿವಾಸ್, FDA ರಂಗಣ್ಣ, ಅಟೆಂಡರ್ ವರಲಕ್ಷ್ಮಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮೈಸೂರು ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುವಾಗಲೇ ಆರೋಪಿಗಳನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಲೋಕಾಯುಕ್ತ ಎಸ್.ಪಿ ಸುರೇಶ್ ಬಾಬು

ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಲೋಕಾಯುಕ್ತ ಡಿವೈಎಸ್ಪಿ ಕೃಷ್ಣ ಹಾಗೂ ನಿರೀಕ್ಷಕರಾದ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಶ್ರೀರಾಂಪುರ ಬಡಾವಣೆಯ 7 ನಿವೇಶನಗಳಿಗೆ ಖಾತೆ ಮಾಡಿಸಲು ಕಾರ್ತಿಕ್ ಗೌಡ ಅರ್ಜಿ ಹಾಗೂ ದಾಖಲೆಗಳನ್ನ ಸಲ್ಲಿಸಿದ್ದರು. ಆದರೆ ಸುಮಾರು ಎರಡು ವರ್ಷಗಳಿಂದ ಖಾತೆ ಮಾಡಿಕೊಡದೆ ವಿಳಂಬ ಮಾಡಿದ್ದರು. ಖಾತೆ ಮಾಡಿಕೊಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಬೇಸತ್ತ ಕಾರ್ತಿಕ್ ಗೌಡ ಅವರು ಲೋಕಾಯುಕ್ತ ಮೊರೆ ಹೋಗಿದ್ದರು. ದೂರು ಸ್ವೀಕರಿಸಿದ ಲೋಕಾಯುಕ್ತ ಇಂದು ಮುಡಾ ಕಚೇರಿಯಲ್ಲಿ ದಾಳಿ ನಡೆಸಿ ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Key words: Muda Tehsildar -staff – Lokayukta- trap – accepting -bribe.