ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರ ಎಡವಟ್ಟು: ಬೈಕ್ ನಿಂದ ಬಿದ್ದು ವೃದ್ಧನಿಗೆ  ಗಂಭೀರ ಗಾಯ.

ಮೈಸೂರು,ಡಿಸೆಂಬರ್,23,2022(www.justkannada.in): ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರು ಮತ್ತೆ ಎಡವಟ್ಟು ಮಾಡಿದ್ದು ವಾಹನ ತಪಾಸಣೆ ವೇಳೆ  ವೃದ್ಧ ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಚಾಮರಾಜಪುರಂ ನ ನಿವಾಸಿ ಬಸವರಾಜು  ಬೈಕ್ ನಿಂದ ಬಿದ್ದು ಗಾಯಗೊಂಡ ವೃದ್ಧ. ಮೈಸೂರಿನ ಆರ್ ಟಿಓ ವೃತ್ತದಲ್ಲಿ ಕೆ ಆರ್ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು . ಹೆಲ್ಮೆಟ್ ಹಾಕದ ವೃದ್ಧನಿಗೆ ಬ್ಯಾರಿಕೇಡ್ ಅಡ್ಡಗಟ್ಟಿ ನಿಲ್ಲಿಸಲು ಟ್ರಾಫಿಕ್ ಪೊಲೀಸರು ಯತ್ನಿಸಿದ್ದು, ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೈಕ್ ನಿಂದ ಬಿದ್ದು ವೃದ್ಧನಿಗೆ  ಗಂಭೀರ ಗಾಯಗಳಾಗಿದೆ.

ಮರದ ಹಿಂದೆ ಅವಿತು ಹಿಡಿಯಲು ಪೊಲೀಸರು ಯತ್ನಿಸಿದ ಪರಿಣಾಮ ಈ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಸಂಚಾರಿ ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರತಿದಿನ ವಾಹನ ತಪಾಸಣೆ ಹೆಸರಿನಲ್ಲಿ ವಾಹನ ಸವಾರರಗೆ ಪೋಲಿಸರು ಕಿರಿಕರಿ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲಕಾಲ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ  ಮಾತಿನ ಚಕಮಕಿ ನಡೆಯಿತು.

Key words: Police – vehicle- inspection –Mysore-Old man- seriously- injured