Wednesday, August 12, 2026

BDA Apartments

Home Front Page ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ: ಕಾಲೇಜಿಗೆ ಕನ್ನಡಪರ ಸಂಘಟನೆಯಿಂದ ಮುತ್ತಿಗೆ.

ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ: ಕಾಲೇಜಿಗೆ ಕನ್ನಡಪರ ಸಂಘಟನೆಯಿಂದ ಮುತ್ತಿಗೆ.

ಬೆಳಗಾವಿ,ಡಿಸೆಂಬರ್,1,2022(www.justkannada.in): ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಸಹಪಾಠಿಗಳೇ ಹಲ್ಲೆ ನಡೆಸಿದ್ದನ್ನ ಖಂಡಿಸಿ ಇಂದು ಬೆಳಗಾವಿಯ ಗೋಗಟೆ ಕಾಲೇಜಿಗೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಿನ್ನೆ ನಡೆದ ಇಂಟರ್ ಕಾಲೇಜು ಫೆಸ್ಟ್ ನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಸಹಪಾಠಿಗಳು ಹಲ್ಲೆ ನಡೆಸಿದ್ದರು. ಅಲ್ಲದೆ ವಿದ್ಯಾರ್ಥಿ ದೂರು ನೀಡಲು ಹೋದಾಗ ಪೊಲೀಸರು ಸಹ ಹಲ್ಲೆ ನಡೆಸಿ ದರ್ಪ ತೋರಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಇಂದು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಗೋಗಟೆ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಲ್ಲದೆ ಕಾಲೇಜಿನ ಆರ್ಚ್ ಮೇಲೆರಿ ಕನ್ನಡ ಬಾವುಟ ಕಟ್ಟಿದರು.  ಈ ವೇಳೆ ಪೊಲೀಸರು ಮತ್ತು ಕನ್ನಡ ಪರ ಸಂಘಟನೆ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು.

Key words: assault – student – hoisted – Kannada flag-Kannada organization-protest