ಕೆಎಎಸ್‌ ಅಕ್ರಮ ನೇಮಕ ಕೆಪಿಎಸ್‌ಸಿ ಅರ್ಜಿ ವಜಾ

ಬೆಂಗಳೂರು:ಜುಲೈ-6: 1998, 1999 ಹಾಗೂ 2004ನೇ ಸಾಲಿನ ಕೆಎಎಸ್‌ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ 2016ರ ಜೂ.21ರಂದು ನೀಡಿರುವ ತೀರ್ಪಿನಲ್ಲಿ ಕೆಲವೊಂದು ಸ್ಪಷ್ಟನೆಗಳನ್ನು ಕೋರಿ ಕರ್ನಾಟಕ ಲೋಕಸೇವಾ ಆಯೋಗ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಕೆಪಿಎಸ್‌ಸಿ ಸಲ್ಲಿಸಿದ್ದ ಅರ್ಜಿ ನ್ಯಾ. ರವಿ ಮಳೀಮs್ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ವಿಶೇಷ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ಆದರೆ, ಕೆಪಿಎಸ್‌ಸಿ ಮಂಡಿಸಿದ ಯಾವ ವಾದಗಳನ್ನೂ ಒಪ್ಪದೆ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿತು. ಅಲ್ಲದೇ ಆಯೋಗಕ್ಕೆ ದಂಡ ವಿಧಿಸುವುದಾಗಿ ಹೇಳಿ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ಆದರೆ, ದಂಡದ ಮೊತ್ತ ಎಷ್ಟೆಂದು ಹೇಳಿಲ್ಲ.

ವಿಚಾರಣೆ ವೇಳೆ ಆಯೋಗದ ಪರ ವಕೀಲರು ವಾದ ಮಂಡಿಸಿ,’ಹೈಕೋರ್ಟ್‌ ನೀಡಿದ್ದ ತೀರ್ಪಿನ ಎರಡು ಹಾಗೂ ಮೂರನೇ ಅಂಶದ ಜಾರಿಯಲ್ಲಿ ತೊಡಕಾಗುತ್ತಿದೆ. ಮೂರನೇ ಅಂಶ ಜಾರಿಗೊಳಿಸಿದರೆ ಎರಡನೇ ಅಂಶದ ಪ್ರಕಾರ ಪರಿಷ್ಕರಿಸುವ ಆಯ್ಕೆ ಪಟ್ಟಿ ಮತ್ತೆ ಪರಿಷ್ಕರಣೆ ಮಾಡಬೇಕಾಗುತ್ತದೆ. ಎರಡನೇ ಅಂಶ ಜಾರಿಗೊಳಿಸಿದರೆ ಮೂರನೇ ಅಂಶ ಜಾರಿಗೊಳಿಸಲಾಗದು. ಆದ್ದರಿಂದ ನ್ಯಾಯಾಲಯವೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು”ಎಂದು ಮನವಿ ಮಾಡಿದರು.ಆದರೆ, ಇದನ್ನು ಒಪ್ಪದ ವಿಶೇಷ ವಿಭಾಗೀಯ ನ್ಯಾಯಪೀಠ, ಹಿಂದೆಯೇ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ಏಕೆ ತರಲಿಲ್ಲ. ಹೈಕೋರ್ಟ್‌, ಸುಪ್ರೀಂಕೋರ್ಟ್‌ ಎಲ್ಲ ಆದೇಶಗಳನ್ನು ನೀಡಿದ ನಂತರವೂ ಸುಮ್ಮನೆ ನೆಪ ಮಾಡಿ ಮಧ್ಯಂತರ ಅರ್ಜಿ ಸಲ್ಲಿಸಿದಂತಿದೆ. ಈ ವಿಚಾರದಲ್ಲಿ ಸರ್ಕಾರ, ಕೆಪಿಎಎಸ್‌ಸಿ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಕೃಪೆ:ಉದಯವಾಣಿ

ಕೆಎಎಸ್‌ ಅಕ್ರಮ ನೇಮಕ ಕೆಪಿಎಸ್‌ಸಿ ಅರ್ಜಿ ವಜಾ
kas-dismisses-kpsc-petition