Friday, August 21, 2026

BDA Apartments

Home Front Page ಲಾಕ್ ಡೌನ್: ಬೆಂಗಳೂರಿಗೆ 53 ವಿಮಾನಗಳ ಹಾರಾಟ ರದ್ದು

ಲಾಕ್ ಡೌನ್: ಬೆಂಗಳೂರಿಗೆ 53 ವಿಮಾನಗಳ ಹಾರಾಟ ರದ್ದು

ಬೆಂಗಳೂರು, ಮೇ 10, 2021 (www.justkannada.in): ರಾಜ್ಯಾದ್ಯಾಂತ ಇಂದಿನಿಂದ ಮೇ. 24 ರವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ಬೆಂಗಳೂರಿನಿಂದ ನಿರ್ಗಮಿಸುವ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಮತ್ತು ಬೆಂಗಳೂರಿನಿಂದ ನಿರ್ಗಮಿಸುವ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಪ್ರಯಾಣಿಕರು ಇಲ್ಲದ ಕಾರಣ ವಿಮಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ.

ಸುಮಾರು 53 ವಿಮಾನಗಳ ಹಾರಾಟವನ್ನು ವಿಮಾನ ಸಂಸ್ಥೆಗಳು ರದ್ದು ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.