ಬೆಂಗಳೂರು,ಆಗಸ್ಟ್,16,2023(www.justkannada.in): ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 30 ಚಿನ್ನದ ಬಿಸ್ಕೆಟ್ ಗಳನ್ನ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.![]()
ಕೋಲ್ಕತ್ತಾದಿಂದ ಬೆಂಗಳೂರು ಏರ್ ಪೋರ್ಟ್ ಗೆ ಪ್ರಯಾಣಿಕ ಬಂದಿಳಿದಿದ್ದನು. ಈ ವೇಳೆ ಅನುಮಾನಗೊಂಡು ವ್ಯಕ್ತಿಯನ್ನ ತಪಾಸಣೆ ನಡೆಸಿದ್ದು ಅಕ್ರಮವಾಗಿ ಚಿನ್ನದ ಬಿಸ್ಕೆಟ್ ಸಾಗಿಸುತ್ತಿದ್ದು ಕಂಡು ಬಂದಿದೆ.
ತಕ್ಷಣ ಕಸ್ಟಮ್ ಅಧಿಕಾರಿಗಳು ವ್ಯಕ್ತಿಯಿಂದ 36 ಲಕ್ಷ ಮೌಲ್ಯದ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್ಗಳನ್ನು ಜಪ್ತಿಮಾಡಿ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Key words: 30 gold- biscuits- seized – Kempegowda airport.







