Sunday, September 27, 2026

BDA Apartments

ಡಿಕೆಶಿ ಸಿಎಂ ಆಗಬೇಕೆಂಬುದು ನನ್ನ ನಿಲುವು: ಹೈಕಮಾಂಡ್ ಸ್ಪಷ್ಟಪಡಿಸಲಿ-‘ಕೈ’ ಶ...
Home Front Page ಡಿಕೆಶಿ ಸಿಎಂ ಆಗಬೇಕೆಂಬುದು ನನ್ನ ನಿಲುವು: ಹೈಕಮಾಂಡ್ ಸ್ಪಷ್ಟಪಡಿಸಲಿ-‘ಕೈ’ ಶಾಸಕ ಆಗ್ರಹ

ಡಿಕೆಶಿ ಸಿಎಂ ಆಗಬೇಕೆಂಬುದು ನನ್ನ ನಿಲುವು: ಹೈಕಮಾಂಡ್ ಸ್ಪಷ್ಟಪಡಿಸಲಿ-‘ಕೈ’ ಶಾಸಕ ಆಗ್ರಹ

ದಾವಣಗೆರೆ,ಫೆಬ್ರವರಿ,5,2026 (www.justkannada.in):  ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗ ಬೇಕೆಂಬುದು ನನ್ನ ನಿಲುವು. ಅಧಿಕಾರ ಹಂಚಿಕೆಯಾಗಿದೆಯೋ? ಇಲ್ಲವೋ? ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸವರಾಜು ಶಿವಗಂಗಾ,  ಅಧಿಕಾರ ಹಂಚಿಕೆ ಆಗಿದೆಯಾ ಇಲ್ಲವೋ ಅನ್ನೋದನ್ನ ಹೇಳಲಿ.  ಒಪ್ಪಂದ ಆಗಿದೆಯಾ ಇಲ್ಲವಾ ಹೈಕಮಾಂಡ್ ಸ್ಪಷ್ಟಪಡಿಸಬೇಕು  ಒಪ್ಪಂದ ಆಗಿಲ್ಲ ಇವರೇ ಸಿಎಂ ಆಗಿರುತ್ತಾರೆ ಅಂದರೆ ಸ್ವಾಗತ.  ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬುದು ನನ್ನ ನಿಲುವು. ನಾನು ಡಿಕೆ ಶಿವಕುಮಾರ್ ಅವರ ಹೆಸರಿನಿಂದಲೇ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದರು.

ಡಿಸೆಂಬರ್ ಆಯಿತು ಸಂಕ್ರಾಂತಿ ಆಯಿತು ಈಗ ಬಜೆಟ್ ಬರುತ್ತಿದೆ. ಹೀಗೆ ನಾವೇ ಪದೇ ಪದೇ ಹೇಳಿಕೆ ನೀಡುವುದು ಸೂಕ್ತ ಅಲ್ಲ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರೆ ಸ್ವಾಗತಿಸುವೆ. ಎಲ್ಲಾ ಗೊಂದಲ ಹೈಕಮಾಂಡ್ ಬಗೆಹರಿಸಬೇಕು  ಎಂದು ಆಗ್ರಹಿಸಿದರು.

Key words: DK Shivakumar, become, CM, Congress, MLA