ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ರ್ಯಾಪಿಡ್ ಟೆಸ್ಟ್ ವೇಳೆ 30ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಪತ್ತೆ …

ಮೈಸೂರು,ಜು,20,2020(www.justkannada.in):  ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಹೆಚ್ಚು ಕೊರೋನಾ ಪ್ರಕರಣ ಕಂಡು ಬಂದ ಈ ಹಿನ್ನೆಲೆ ಆ ಕ್ಷೇತ್ರವನ್ನ ಲಾಕ್ ಡೌನ್ ಮಾಡಲಾಗಿದ್ದು ರ್ಯಾಂಡಮ್ ಟೆಸ್ಟ್ ನಡೆಯುತ್ತಿದೆ. ಈ ಮಧ್ಯೆ ರ್ಯಾಪಿಡ್ ಟೆಸ್ಟ್ ವೇಳೆ 30ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.jk-logo-justkannada-logo

ನರಸಿಂಹರಾಜ ಕ್ಷೇತ್ರದಲ್ಲಿ ರ್ಯಾಂಡಮ್ ಟೆಸ್ಟಿಂಗ್ ವಿಚಾರ ಕುರಿತು ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಕಳೆದ ಮೂರು ದಿನಗಳಿಂದ ರ್ಯಾಂಡಮ್ ಟೆಸ್ಟ್ ನಡೆಯುತ್ತಿದೆ. ಎನ್ ಆರ್ ಕ್ಷೇತ್ರದಲ್ಲಿ ಈವರೆಗೆ 137 ರ್ಯಾಪಿಡ್ ಟೆಸ್ಟ್ ನಡೆದಿದೆ. ಅದರಲ್ಲಿ 30ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಬಂದಿವೆ. 20 ಟೆಸ್ಟಿಂಗ್ ಟೀಮ್ ಗಳು ಕೆಲಸ ಮಾಡ್ತಿವೆ. ಮನೆಮನೆಗೆ ತೆರಳಿ ಪರೀಕ್ಷೆ ಮಾಡುವಂತಹ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಸ್ಥಳೀಯರು ಕೂಡ ಸಹಕಾರ ವನ್ನು ಕೊಡಬೇಕು ಎಂದು ಮನವಿ ಮಾಡಿದರು.30-corona-positive-case-rapid-test-nr-constituency-mysore

ಕೋವಿಡ್ ಮ್ಯಾಪ್ ನಲ್ಲೂ ಕೂಡಾ ಎನ್.ಆರ್.ಕ್ಷೇತ್ರದ ಪಬ್ಲಿಕ್ ಡೆನ್ಸಿಟಿ ಜಾಸ್ತಿ ಇರೋದು ಗೊತ್ತಾಗಿದೆ. ಆ ಭಾಗದಲ್ಲಿ ಹೆಚ್ಚು ಡೆತ್ ಆಗೋ ಕಾರಣಕ್ಕಾಗಿ ರ್ಯಾಂಡಮ್ ಟೆಸ್ಟ್ ಗಳು ನಡೆಯುತ್ತಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್  ಹೇಳಿದರು.

Key words: 30 Corona Positive- Case – Rapid Test – NR – constituency- Mysore