ಕೊರೋನಾ ರಾಯಭಾರಿಯಾಗಿ ನಟ ರಮೇಶ್ ಅರವಿಂದ ನೇಮಕ…

ಬೆಂಗಳೂರು,ಜು,20,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಇತ್ತೀಚೆಗೆ ದಿನನಿತ್ಯ 2ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗಿತ್ತಿದ್ದು ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಬಿಬಿಎಂಪಿ ಹರ ಸಾಹಸ ಪಡುತ್ತಿದೆ.

ಈ ನಡುವೆ ಕೊರೋನಾ ರಾಯಭಾರಿಯಾಗಿ ನಟ ರಮೇಶ್ ಅರವಿಂದ್ ಅವರನ್ನ ನೇಮಿಸಿ ಬಿಬಿಎಂಪಿ ಆದೇಶಿಸಿದೆ. ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಟ ರಮೇಶ್ ಅರವಿಂದ್ ಅವರನ್ನ ಕೊರೋನಾ ರಾಯಭಾರಿಯನ್ನಾಗಿ ನೇಮಿಸಿದೆ.actor-ramesh-aravind-appointed-corona-ambassador-bbmp

ಬೆಂಗಳೂರಿನಲ್ಲಿ ನಿನ್ನೆ 2156 ಕೊರೋನಾ ಪ್ರಕರಣಗಳು ಪತ್ತೆಯಾಗಿತ್ತು. ಕೊರೋನಾ ನಿಯಂತ್ರಣ ಸಂಬಂಧ ಸಂಜೆ ಬೆಂಗಳೂರು ಸಚಿವರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Actor- Ramesh Aravind- appointed – Corona Ambassador-      BBMP