Thursday, July 30, 2026

BDA Apartments

Home Front Page ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಯಾವಾಗ..?  ಮಾಹಿತಿ ನೀಡಿದ ಸಚಿವ ಕೆ.ಎನ್ ರಾಜಣ್ಣ.

ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಯಾವಾಗ..?  ಮಾಹಿತಿ ನೀಡಿದ ಸಚಿವ ಕೆ.ಎನ್ ರಾಜಣ್ಣ.

ತುಮಕೂರು,ಮಾರ್ಚ್,9,2024(www.justkannada.in):  ಲೋಕಸಭೆ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ರಾಜ್ಯದ 7 ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದೆ. ಈ ನಡುವೆ 2ನೇ ಪಟ್ಟಿ ಯಾವಾಗ ಬಿಡುಗಡೆ ಮಾಡಲಿದೆ ಎಂಬುದರ ಬಗ್ಗೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಮಾಹಿತಿ ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಸೋಮವಾರ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಲೀಸ್ಟ್ ಬಿಡುಗಡೆಯಾಗಲಿದೆ.   ಹಾಸನದಲ್ಲಿ ಶ್ರೇಯಸ್ ಪಾಟೀಲ್ ಗೆ ಟಿಕೆಟ್ ನೀಡಲಾಗಿದೆ  ತುಮಕೂರಿನಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲಾಗಿದೆ. ಹಾಸನ ತುಮಕೂರಿನಲ್ಲಿ  ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ತಾರೆ ಎಂದರು.

ಆಕಾಂಕ್ಷಿಗಳಿಗೆ ಬೇಸರ ಇದ್ದೇಇರುತ್ತೆ. ಹೈಕಮಾಂಡ್ ತೀರ್ಮಾನ ಬಳಿಕ ಎಲ್ಲರೂ ಒಪ್ಪಿಕೊಳ್ಳಬೇಕು. ಜಿಎಸ್ ಬಸವರಾಜ್ ಬೆಂಬಲ ಯಾರಿಗೆ ಅಂತಾ ಗೊತ್ತಿಲ್ಲ ಎಂದು ಕೆ.ಎನ್ ರಾಜಣ್ಣ ತಿಳಿಸಿದರು.

Key words: 2nd list – Congress candidates-Minister- KN Rajanna