Thursday, July 30, 2026

BDA Apartments

Home Front Page ನಾನು ಎಚ್ಚರಿಕೆ ಕೊಡ್ತಿಲ್ಲ: ಡಿಮ್ಯಾಂಡ್ ಮಾಡುತ್ತಿದ್ದೇನೆ-ಲೋಕಸಭೆ ಟಿಕೆಟ್ ಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ಪಟ್ಟು

ನಾನು ಎಚ್ಚರಿಕೆ ಕೊಡ್ತಿಲ್ಲ: ಡಿಮ್ಯಾಂಡ್ ಮಾಡುತ್ತಿದ್ದೇನೆ-ಲೋಕಸಭೆ ಟಿಕೆಟ್ ಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ಪಟ್ಟು

ಹಾವೇರಿ,ಮಾರ್ಚ್,9,2024(www.justkannada.in):  ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಸಚಿವ ಬಿ.ಸಿ ಪಾಟೀಲ್ ಪಟ್ಟು ಹಿಡಿದಿದ್ದು, ನಾನು ಎಚ್ಚರಿಕೆ ಕೊಡ್ತಿಲ್ಲ: ಡಿಮ್ಯಾಂಡ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಮಾಜಿ ಸಚಿವ ಬಿ.ಸಿ ಪಾಟೀಲ್,  ನಾವು ತ್ಯಾಗ ಮಾಡಿ ಬಂದವರು, ಈಗ ಮನೆಯಲ್ಲಿದ್ದೇವೆ. ನಮಗೆ ಹೆದರಿಸುವುದು, ಬೆದರಿಸುವುದು ಎಲ್ಲ ಗೊತ್ತಿಲ್ಲ. ಸೈಲೆಂಟ್ ಆಗಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ.ಈಗಾಗಲೇ ಬಸವರಾಜ್ ಬೊಮ್ಮಾಯಿ ಸಿಎಂಆಗಿದ್ದಾರೆ. ನಾನು ಹಾವೇರಿ-ಗದಗ ಜಿಲ್ಲೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ನನಗೆ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ನಾನು ಟಿಕೆಟ್ ಬೆನ್ನುಹತ್ತಿಕೊಂಡು ಹೋಗುವುದಿಲ್ಲ. ನನಗೆ ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದೇನೆ. ನಾನು ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ದಾರಿ ಹಿಡಿಯಲ್ಲ. ನನಗೆ ನಂದೇ ಹಾದಿ ಇದೆ. ನಾನು ಎಚ್ಚರಿಕೆ ಕೊಡ್ತಿಲ್ಲ, ಡಿಮ್ಯಾಂಡ್ ಮಾಡುತ್ತಿದ್ದೇನೆ ಎಂದು ಬಿಸಿ ಪಾಟೀಲ್ ತಿಳಿಸಿದರು.

Key words: Lok Sabha-election- ticket- demand-former minister- BC Patil