Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ನಾಳೆಯಿಂದ ಲಾಲ್ ಬಾಗ್ ನಲ್ಲಿ 214ನೇ ಫ್ಲವರ್ ಶೋ: ಈ ಬಾರಿ ವಿಶೇಷತೆ ಏನು..?

ನಾಳೆಯಿಂದ ಲಾಲ್ ಬಾಗ್ ನಲ್ಲಿ 214ನೇ ಫ್ಲವರ್ ಶೋ: ಈ ಬಾರಿ ವಿಶೇಷತೆ ಏನು..?

 

ಬೆಂಗಳೂರು,ಆಗಸ್ಟ್,3,2023(www.justkannada.in): 76ನೇ ಸ್ವಾತಂತ್ರ್ಯ ದಿನಾಚರಣೆ  ಅಂಗವಾಗಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ  ನಾಳೆಯಿಂದ 214ನೇ ಫ್ಲವರ್ ಶೋ  ನಡೆಯಲಿದೆ.

ನಾಳೆ ಸಂಜೆ 6 ಗಂಟೆಗೆ ಸಿಎಂ‌ ಸಿದ್ದರಾಮಯ್ಯ ಲಾಲ್ ಬಾಗ್ ಫ್ಲವರ್  ಶೋ ಉದ್ಘಾಟಿಸಲಿದ್ದಾರೆ. ಆ.4ರಿಂದ ಶುರುವಾಗಿ ಆಗಸ್ಟ್ 15ರ ವರೆಗೆ ಫ್ಲವರ್ ಶೋ ನಡೆಯಲಿದೆ. ‘

ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ.  ಫ್ಲವರ್ ಶೋಗೆ ಬರೋಬ್ಬರಿ 2 ಕೋಟಿ ಖರ್ಚುಮಾಡುತ್ತಿದ್ದು, 69 ಬಗೆಯ ಹೂಗಳು ಈ ಬಾರಿ ಫ್ಲವರ್ ಶೋ ಅಂದವನ್ನ ಹೆಚ್ಚಿಸಲಿವೆ. ಈ ವರ್ಷ 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ.

 ಫ್ಲವರ್ ಶೋಗೆ ಶಾಲಾ ಮಕ್ಕಳಿಗೆ ಫ್ರೀ ಇರಲಿದ್ದು, ಶಾಲಾ ಮಕ್ಕಳಿಗೆ ಕಾಂಪಿಟೇಷನ್ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಫ್ಲವರ್ ಶೋ ವೀಕ್ಷಣೆಗೆ ಬರುವವರಿಗೆ ನಾಲ್ಕು ಕಡೆ ಪಾರ್ಕಿಂಗ್ ವ್ಯವಸ್ಥೆ ಇದೆ. ಟ್ರಾಫಿಕ್ ಸಮಸ್ಯೆ ಹಿನ್ನೆಲೆ ಜನರು ಮೆಟ್ರೋ ಹಾಗೂ ಬಿಎಂಟಿಸಿ ಬಸ್ಸುಗಳಿಂದ ಬರುವಂತೆ ತೋಟಗಾರಿಕೆ ಇಲಾಖೆಯಿಂದ ಮನವಿ ಮಾಡಲಾಗಿದೆ.

ಫ್ಲವರ್ ಶೋ ಬರುವವರಿಗೆ ಎಂಟ್ರಿ ಫೀಜ್ ದೊಡ್ಡವರಿಗೆ 70 ರೂ ಹಾಗೂ ಮಕ್ಕಳಿಗೆ 30 ರುಪಾಯಿ ನಿಗದಿ ಮಾಡಿದ್ದು, 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ. ಪ್ಲವರ್ ಶೋ ನಡೆಯುವ 10 ದಿನಗಳ‌ ಕಾಲ ಪ್ರತಿದಿನ 30 ಜನ ಪೋಲಿಸರು ಹಾಗೂ 200 ಜನ ತೋಟಗಾರಿಕಾ ಸಿಬ್ಬಂದಿಯನ್ನ ನೇಮಿಸಲಾಗಿದೆ. ಈ ಬಾರಿಯ ಪ್ರದರ್ಶನದಲ್ಲಿ ಸ್ವದೇಶಿ ಹೂಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡಲಾಗುತ್ತಿದೆ.

Key words:  214th -Flower Show – Lal Bagh – Tomorrow