ಮೋದಿ ದೇಶದ ಆರ್ಥಿಕತೆ ಹಾಳುಗೆಡವಿದ್ದಾರೆ: ಕರ್ನಾಟಕ ಮಾದರಿ ಅಭಿವೃದ್ಧಿ ಅರ್ಥ ಮಾಡಿಕೊಳ್ಳಲಿ- ಸಿಎಂ ಸಿದ‍್ಧರಾಮಯ್ಯ ಟಾಂಗ್.

ನವದೆಹಲಿ,ಆಗಸ್ಟ್,3,2023(www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನ ಹಾಳುಗೆಡವಿದ್ದಾರೆ.

ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿಯಾಗಲ್ಲ ಎಂಬ ಮೋದಿಯವರ ಆರೋಪ ಪೂರ್ತಿ ಸುಳ್ಳು. ನಾವು ಬಜೆಟ್ ನಲ್ಲಿ ಐದು ಗ್ಯಾಂಟಿಗಳಿಗೆ ಹಣ ಒದಗಿಸುವ ಜೊತೆ 76 ಭರವಸೆಗಳಿಗೂ ಹಣ ನೀಡಿದ್ದೇವೆ.  ಎಲ್ಲಾ ಜಾತಿ ಧರ್ಮದವರ ಬದುಕಿಗೂ ಸ್ಪಂದಿಸುವ ಯೋಜನೆಗಳಿವೆ.  ದೇಶದ ಆರ್ಥಿಕತೆಯನ್ನ ಮೋದಿ ಹಾಳು ಮಾಡಿದ್ದಾರೆ. ಹೀಗಾಗಿ ಕರ್ನಾಟಕ ಮಾದರಿ  ಅಭಿವೃದ್ಧಿಯನ್ನ ಅರ್ಥ ಮಾಡಿಕೊಳ್ಳಲಿ. ಇನ್ನಾದರೂ ದೇಶವನ್ನ ಸರಿದಾರಿಯಲ್ಲಿ ಮುನ್ನಡೆಸಲಿ ಎಂದು ಹೇಳಿದರು.

ಕಾಂಗ್ರೆಸ್ ಪರ ವಾತಾವರಣ ಇದೆ. ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಜೆಡಿಎಸ್​ ನವರು ಗ್ಯಾರಂಟಿ ಜಾರಿ ಮಾಡುವುದಕ್ಕೆ ಆಗಲ್ಲ ಎಂದು ಸುಳ್ಳು ಹೇಳಿದರು. ಮೋದಿ ಕೂಡಾ ಆರ್ಥಿಕ ದಿವಾಳಿ ಆಗುತ್ತೆ ಎಂದು ಹೇಳಿದ್ದರು. ನಾವು ಅದಾಗ್ಯೂ ಯೋಜನೆ ಜಾರಿ ಮಾಡಿ ತೋರಿಸಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ, ಜನದ್ರೋಹದ ಕೆಲಸ ಮಾಡಿದರು. ದುಡ್ಡು ಕೊಡುತ್ತೇವೆ ಅಂದರೂ ಅಕ್ಕಿ ಕೊಡಲಿಲ್ಲ ಎಂದು ಸಿಎಂ ಸಿದ‍್ಧರಾಮಯ್ಯ ಕಿಡಿಕಾರಿದರು.

Key words: Modi – country- economy-  CM- Siddharramaiah -Tong.