ಜ್ಞಾನವ್ಯಾಪಿ ಮಸೀದಿ ವೈಜ್ಞಾನಿಕ ಸರ್ವೇಗೆ ಅಲಹಾಬಾದ್ ಹೈಕೋರ್ಟ್ ಗ್ರೀನ್ ಸಿಗ್ನಲ್.

ಉತ್ತರ ಪ್ರದೇಶ,ಆಗಸ್ಟ್,3,2023(www.justkannada.in):  ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ ವೈಜ್ಞಾನಿಕ ಸರ್ವೇಗೆ ಅಲಹಾಬಾದ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ವೈಜ್ಞಾನಿಕ ಸರ್ವೇಗೆ ತಡೆ ನೀಡುವಂತೆ ಕೋರಿ  ಮಸೀದಿ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್ ವಾರಣಾಸಿ ಜಿಲ್ಲಾ ಕೋರ್ಟ್ ತೀರ್ಪನ್ನ ಎತ್ತಿ ಹಿಡಿದು ಸರ್ವೇಗೆ ಅನುಮತಿ ನೀಡಿದೆ.

ಜ್ಞಾನವ್ಯಾಪಿ ಸರ್ವೇ ನಡೆಸುವ ಅವಶ್ಯಕತೆ ಇದೆ. ನ್ಯಾಯ ಒದಗಿಸುವ ದೃಷ್ಠಿಯಿಂದ ವೈಜ್ಞಾನಿಕ ಸರ್ವೇ  ಅವಶ್ಯಕತೆ ಇದೆ ಎಂದು ತಿಳಿಸಿದ ಅಲಹಾಬಾದ್ ಹೈಕೋರ್ಟ್, ಹಲವು ಷರತ್ತ ವಿಧಿಸಿ ಸರ್ವೆ ನಡೆಸಲು ಅನುಮತಿ ನೀಡಿದೆ.

ಜ್ಞಾನವಾಪಿ ಮಸೀದಿ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ ಮತ್ತು ಹಿಂದೂ ಕಕ್ಷಿದಾರರು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಈ ಹಿಂದೆ ಇದೇ ಸ್ಥಳದಲ್ಲಿ ದೇವಾಲಯ ಅಸ್ತಿತ್ವದಲ್ಲಿತ್ತೇ ಎಂದು ನಿರ್ಧರಿಸಲು ಎಎಸ್‌ಐ ಸಮೀಕ್ಷೆಯನ್ನು ಕೋರಿದ್ದರು. ಎಎಸ್‌ ಐ ಸಮೀಕ್ಷೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು.  ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಯ ನೀಡಿದ ನಂತರ ಮಸೀದಿ ಸಮಿತಿಯು ಹೈಕೋರ್ಟ್ ಗೆ ಮೊರೆ  ಹೋಗಿತ್ತು.

Key words: Allahabad -High Court – green signal – Jnanavyapi Masjid -Scientific -Survey.