Sunday, October 18, 2026

Dasara Wishes

Happy Dasara
Home Front Page ನಿರಂತರ ಮಳೆಗೆ 200 ವರ್ಷಗಳ ಹಳೆಯ ಗರಡಿ ಮನೆ ಕುಸಿತ.

ನಿರಂತರ ಮಳೆಗೆ 200 ವರ್ಷಗಳ ಹಳೆಯ ಗರಡಿ ಮನೆ ಕುಸಿತ.

ನಂಜನಗೂಡು,ಸೆಪ್ಟಂಬರ್,7,2022(www.justkannada.in):  ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಂಜ ನಗೂಡು ಪಟ್ಟಣದ ಶ್ರೀರಾಂಪುರ ಬಡಾವಣೆಯ 200 ವರ್ಷಗಳ ಹಳೆಯ ಗರಡಿಮನೆ ಕುಸಿದು ಬಿದ್ದಿದೆ.

ಬೆಳಿಗ್ಗೆ  ಈ ಅವಘಡ ಸಂಭವಿಸಿದ್ದು, ಆ ಸಮಯದಲ್ಲಿ ಗರಡಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಲ್ಲಿ ನಿರಂತರವಾಗಿ ಕುಸ್ತಿ ಪಟುಗಳ ಕಸರತ್ತು ನಡೆಸುತ್ತಿದ್ದು, ಮಹಾರಾಜರ ಆಳ್ವಿಕೆಯ ಕಾಲದಿಂದಲೂ ರಾಜಾಶ್ರಯ ಪಡೆದು ನಡೆದು ಕೊಂಡು ಬರುತ್ತಿದ್ದ ಈ ಗರಡಿ ಮನೆ ನೂರಾರು ಕುಸ್ತಿಪಟುಗಳನ್ನು ಸಿದ್ದಪಡಿಸಿದ ಹೆಗ್ಗಳಿಕೆ ಹೊಂದಿದೆ. ನಿರಂತರ ಮಳೆಗೆ 200 ವರ್ಷಗಳ ಹಳೆಯ ಗರಡಿ ಮನೆ ಕುಸಿತ garadi mane

ಇದೀಗ ಗರಡಿ ಮನೆ ಕುಸಿದು ಬಿದ್ದಿದ್ದು, ಸರ್ಕಾರ ಇತ್ತ ಕಡೆ ಗಮನಹರಿಸಿ ಪುನರ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು  ಕುಸ್ತಿ ಪ್ರಿಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Key words: 200 year- old -garadi house -collapsed – rain.