Thursday, August 20, 2026

BDA Apartments

Home Cinema ವಂದನಾ ಜೈನ್ ಬಳಿ 200 ಕೋಟಿ ಅಕ್ರಮ ಆಸ್ತಿ: ಇಷ್ಟೊಂದು ಆಸ್ತಿ ಹೇಗೆ ಬಂತು ಎಂಬ...

ವಂದನಾ ಜೈನ್ ಬಳಿ 200 ಕೋಟಿ ಅಕ್ರಮ ಆಸ್ತಿ: ಇಷ್ಟೊಂದು ಆಸ್ತಿ ಹೇಗೆ ಬಂತು ಎಂಬ ಬಗ್ಗೆ ತನಿಖೆಯಾಗಲಿ- ಗಂಭೀರ ಆರೋಪ ಮಾಡಿದ ನಟಿ ಸಂಜನಾ…

ಬೆಂಗಳೂರು,ಡಿ,27,2019(www.justkannada.in):  ಬೆಂಗಳೂರಿನ ಸ್ಟಾರ್ ಹೋಟೆಲ್ ನಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ   ನಿರ್ಮಾಪಕಿ ವಂದನಾ ಜೈನ್ ವಿರುದ್ದ ನಟಿ ಸಂಜನಾ ಆರೋಪಗಳ ಸುರಿಮಳೆ ಸುರಿಸಿದ್ದಾರೆ.

ವಂದನಾ ಜೈನ್ 200 ಕೋಟಿ ಅಕ್ರಮ ಆಸ್ತಿ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆಗೆ ಮನವಿ ಮಾಡುತ್ತೇನೆ. ಅವಳಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂದು ಹೇಗೆ ಬಂತು ಎಂಬುದು ತನಿಖೆಯಾಗಬೇಕು ಎಂದು ನಟಿ ಸಂಜನ ತಿಳಿಸಿದ್ದಾರೆ.

ಗಲಾಟೆ ಪ್ರಕರಣಕ ಕುರಿತು ಮಾತನಾಡಿರುವ ನಟಿ ಸಂಜನಾ, ವಂದನಾ ಜೈನ್ ಗೆ ಬೆಂಗಳೂರಿನಲ್ಲಿ ಯಾವುದೇ ವ್ಯವಹಾರವಿಲ್ಲ. ಯಾವುದೇ ಕಂಪನಿ ನಡೆಸುತ್ತಿಲ್ಲ. ಆದರೆ 200 ಕೋಟಿ ಅಕ್ರಮ ಆಸ್ತಿ ಇದೆ. ಮುಂಬೈನಲ್ಲಿ 20 ಕೋಟಿ ಮೌಲ್ಯದ ಬಂಗಲೆ ಇದೆ.  ರಾಜಕಾರಣಿಗಳ ಬಳಿ ವಸೂಲಿ ಮಾಡಿ ಮನೆ ಖರೀದಿಸಿದ್ದಾಳೆ. ಸೆಲೆಬ್ರಿಟಿಗಳ ಬಳಿಯೂ ವಸೂಲಿ ಮಾಡುತ್ತಾರೆ.  ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲೂ ವಂದನಾ ಜೈನ್ ಆಸ್ತಿ ಹೊಂದಿದ್ದು ಬೆಂಗಳೂರಿನಲ್ಲಿ ವಾಸವಿರುವ ಮನೆ ಸಹ ಅಕ್ರಮ ಆಸ್ತಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಾಗೆಯೇ ಕ್ರಿಕೆಟರ್ ಅಮಿತ್ ಮಿಶ್ರಾ ಬೀದಿಗೆ ಬರಲು ವಂದನಾ ಜೈನ್ ಕಾರಣ. ತಂಡದಿಂದ ಅಮಿತ್ ಮಿಶ್ರಾ ಹೊರ ಬೀಳಲು ವಂದನಾ ಜೈನ್ ಕಾರಣ ಎಂದು ನಟಿ ಸಂಜನಾ ದೂರಿದ್ದಾರೆ.

Key words: 200 crore- illicit property – Vandana Jain-  Actress- Sanjana – allegations.