Sunday, October 4, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಕೆಆರ್ ಎಸ್ ಬಾಗಿನ ಕಾರ್ಯಕ್ರಮಕ್ಕೆ 13 ಲಕ್ಷ. ರೂ ಖರ್ಚು: ಸರ್ಕಾರದ ವಿರುದ್ದ ಶಾಸಕ ರವೀಂದ್ರ...

ಕೆಆರ್ ಎಸ್ ಬಾಗಿನ ಕಾರ್ಯಕ್ರಮಕ್ಕೆ 13 ಲಕ್ಷ. ರೂ ಖರ್ಚು: ಸರ್ಕಾರದ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ

ಮಂಡ್ಯ, ಆಗಸ್ಟ್, 24,2020(www.justkannada.in) : ಕೆಆರ್ ಎಸ್ ಜಲಾಶಯಕ್ಕೆ ಸಿಎಂ ಅವರಿಂದ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ 13 ಲಕ್ಷ ರೂ. ಖರ್ಚು ಮಾಡಿರುವುದಾಗಿ ಅಧಿಕಾರಿಗಳು ತಮಗಿಷ್ಟ ಬಂದಂತೆ ಲೆಕ್ಕ ತೋರುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

13 lakhs,KRS,Bagina,offering,program,MLA,Ravindra Srikanth,Outrage

ಈ ಸಂಬಂಧ ಸರ್ಕಾರದ ವಿರುದ್ದ ಕಿಡಿಕಾರಿರುವ ಅವರು,  ಇಡೀ ಕಾರ್ಯಕ್ರಮವು ಅವ್ಯವಸ್ಥೆಯಿಂದ ಕೂಡಿತ್ತು. ಮಾವಿನ ತೋರಣ, ಬಾಳೆ ಕಂಬ ಕಟ್ಟುವುದಕ್ಕೆ ಇಷ್ಟೊಂದು ಲಕ್ಷ ಖರ್ಚು ಮಾಡಲಾಗಿದೆಯೇ ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.

ಹಾಗೆಯೇ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ದುಂದುವೆಚ್ಚಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.

Key words : 13 lakhs-KRS-Bagina-offering-program-MLA-Ravindra Srikanth,Outrage