Friday, August 7, 2026

BDA Apartments

Home Front Page ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್: ಸಿಎಂ ಹೇಳಿರುವುದು ನೂರಕ್ಕೆ ನೂರು ಸತ್ಯ- ಸಚಿವ ಸಂತೋಷ್...

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್: ಸಿಎಂ ಹೇಳಿರುವುದು ನೂರಕ್ಕೆ ನೂರು ಸತ್ಯ- ಸಚಿವ ಸಂತೋಷ್ ಲಾಡ್

ಬೆಂಗಳೂರು,ನವೆಂಬರ್, 14,2024 (www.justkannada.in):  ಕಾಂಗ್ರೆಸ್ 50 ಶಾಸಕರಿಗೆ ತಲಾ  50 ಕೋಟಿ ರೂ ಆಫರ್  ನೀಡಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನುಸಚಿವ ಸಂತೋಷ್ ಲಾಡ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸಂತೋಷ್ ಲಾಡ್, ಕಾಂಗ್ರೆಸ್ 50 ಶಾಸಕರಿಗೆ 50 ಕೋಟಿ ಆಫರ್ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿರೋದು ನೂರಕ್ಕೆ ನೂರು ಸತ್ಯ.  ಕೆಲ ತಿಂಗಳಿಂದ ಸರ್ಕಾರ ಅಸ್ಥಿರಕ್ಕೆ ಯತ್ನಿಸುತ್ತಿದ್ದಾರೆ.  ನಮ್ಮ ಶಾಸಕರಿಗೆ ಆಮಿಷ ಒಡ್ಡುತ್ತಿರುವ ಮಾಹಿತಿ  ಬಂದಿದೆ ಸಿದ್ದರಾಮಯ್ಯನವರ ಬಳಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದೆ.  ನನಗೂ ಕೆಲ ಶಾಸಕರು ಹೇಳಿದ್ದಾರೆ ಮೋದಿ ಸಾಹೇಭರಿಗೆ ಎಲ್ಲವೂ ಸಾಧ್ಯ. ಏನು ಬೇಕಾದರೂ ಮಾಡುತ್ತಾರೆ. ಎಂದು ಕುಟುಕಿದರು.

ಮಹಾರಾಷ್ಟ್ರ ಮಧ್ಯಪ್ರದೇಶದಲ್ಲಿ ಸರ್ಕಾರ ಬೀಳಿಸಿದ್ದಾರೆ. ಕರ್ನಾಟಕ ಸರ್ಕಾರ ಬೀಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

Key words: 50 crore, offer, Congress, MLAs, Minister, Santosh Lad