ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಬಿಪಿನ್ ರಾವತ್ ಸೇರಿ 11 ಯೋಧರಿಗೆ ಮೈಸೂರಿನಲ್ಲಿ ಶ್ರದ್ಧಾಂಜಲಿ.

ಮೈಸೂರು,ಡಿಸೆಂಬರ್,9,2021(www.justkannada.in): ತಮಿಳುನಾಡಿನ ಕೂನೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ  ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮತ್ತು  ಹುತಾತ್ಮರಾದ 11 ವೀರ ಯೋಧರಿಗೆ ಮೈಸೂರಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿಜೆಪಿ ಕಚೇರಿಯಲ್ಲಿ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಕೆ…

ಕೆ.ಆರ್ ಕ್ಷೇತ್ರದ  ಬಿಜೆಪಿ  ವತಿಯಿಂದ  ವಿದ್ಯಾರಣ್ಯಪುರಂ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎರಡು ನಿಮಿಷ ಮೌನಾಚಾರಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಬಿಪಿನ್ ರಾವತ್ ಅವರ ಸ್ಮರಣಾರ್ಥ 5ಕೋಟಿ ವೆಚ್ಚದಲ್ಲಿ ಸೈನಿಕ ಸ್ಮಾರಕ ಉದ್ಯಾನ ನಿರ್ಮಾಣ ಮಾಡಲಾಗುತ್ತದೆ. ಇನ್ನ 6 ತಿಂಗಳಲ್ಲಿ ಸ್ಮಾರಕ ಉದ್ಯಾನ ನಿರ್ಮಾಣ ಮಾಡುತ್ತೇವೆ. ದೇಶಕ್ಕೆ ಸೇವೆ ಸಲ್ಲಿಸಿದ ವೀರ ಯೋಧರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ  ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ಕೆ.ಆರ್ ಕ್ಷೇತ್ರದ ಭಾಜಪಾ ಉಪಾಧ್ಯಕ್ಷ ಜೆ.ರವಿ, ದೇವರಾಜೇ ಗೌಡರು, ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ಮೈ.ಪು.ರಾಜೇಶ್, ಎಸ್.ಸಿ. ಮೋರ್ಚಾ ನಗರಾಧ್ಯಕ್ಷರಾದ ಈಶ್ವರ್, ಕಾರ್ಯದರ್ಶಿಗಳಾದ ಪಿ.ಟಿ.ಕೃಷ್ಣ(ನಗರಪಾಲಿಕಾ ನಾಮನಿರ್ದೇಶಿತ ಸದಸ್ಯರು), ಗಿರೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.

 

ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಯೋಧರಿಗೆ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ. 

ಸೇನಾ ಹೆಲಿಕ್ಯಾಪ್ಟರ್  ದುರಂತದಲ್ಲಿ ಮೃತರಾದ  ಸಿಡಿಎಸ್  ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್  ಹಾಗೂ 11 ಯೋಧರಿಗೆ  ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೇನಾ ದಂಡನಾಯಕ ಬಿಪಿನ್ ರಾವತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.  ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಯಣ್, ಹೆಚ್.ಸಿ ಮಹದೇವಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

Key words: MLA -SA Ramadas- Bipin Rawat – helicopter -disaster