ನಾಳೆ ಶಿವಮೊಗ್ಗ ಕಾರಾಗೃಹಕ್ಕೆ ‘ಸೂಪರ್ ಸ್ಟಾರ್’ ದಳಪತಿ ವಿಜಯ್.!

ಬೆಂಗಳೂರು, ನವೆಂಬರ್ 30, 2019 (www.justkannada.in): ವಿಜಯ್ ಅಭಿನಯಿಸಿರುವ ಮತ್ತೊಂದು ಹೈ ಬೆಜಟ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಮತ್ತೊಂದು ಶೆಡ್ಯೂಲ್ ಗಾಗಿ ಶಿವಮೊಗ್ಗ ಕಾರಾಗೃಹಕ್ಕೆ ಎಂಟ್ರಿ ಕೊಡುತ್ತಿದೆ.

ವಿಜಯ್ ಅವರ ಮುಂದಿನ ಸಿನಿಮಾ ದಳಪತಿ 64 ಸಿನಿಮಾದ ಶೂಟಿಂಗ್ ಗಾಗಿ ಡಿ. 1 ರಂದು ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿಯೇ ಇದೊಂದು ವಿಶೇಷ ಕಾರಾಗೃಹವಾಗಿದ್ದು, ಈ ಹಿಂದೆ ಶಿವರಾಜ್ ಕುಮಾರ್ ಅಭಿನಯದ ವಿಲನ್ ಸಿನಿಮಾದ ಶೂಟಿಂಗ್ ಕೂಡ ಇಲ್ಲಿ ನಡೆದಿತ್ತು.

ಸದ್ಯ ವಿಜಯ್ ಅವರ ದಳಪತಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊದಲ ಹಂತದ ಶೂಟಿಂಗ್ ದೆಹಲಿಯಲ್ಲಿ ಮುಗಿಸಿ ವಿಜಯ್ ಅಂಡ್ ಟೀಮ್ ಈಗ ಶಿವಮೊಗ್ಗದ ಕಡೆ ಹೊರಟಿದೆ.