ಡೇ-ನೈಟ್ ಟೆಸ್ಟ್: ಪಾಕ್ ವಿರುದ್ಧ ದಾಖಲೆ ಬರೆದ ಡೇವಿಡ್ ವಾರ್ನರ್

ಅಡಿಲೇಡ್, ನವೆಂಬರ್ 30, 2019 (www.justkannada.in): ಪಾಕಿಸ್ತಾನದ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆ ನಿರ್ಮಾಣ ಮಾಡಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಜೇಯ 275 ರನ್ ಗಳಿಸಿ ತ್ರಿಶತಕದತ್ತ ಹೆಜ್ಜೆಯನ್ನಿರಿಸಿದ್ದಾರೆ. ಅಲ್ಲದೆ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಗರಿಷ್ಛ ರನ್ ಗಳಿಸಿದ ಸಾಧನೆ ಗೈದಿದ್ದಾರೆ.

ಅಡಿಲೇಡ್ ಪಂದ್ಯದ ಮೂಲಕ ವಾರ್ನರ್ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಒಟ್ಟು 460 ರನ್ ಗಳಿಸಿದ್ದು, ಆ ಮೂಲಕ ಈ ಸಾಧನೆಗೈದಿದ್ದ ಪಾಕಿಸ್ತಾನ ಅಜರ್ ಅಲಿ ಅವರನ್ನು ಹಿಂದಿಕ್ಕಿದ್ದಾರೆ. ಅಜರ್ ಅಲಿ 456 ರನ್ ಗಳಿಸಿದ್ದಾರೆ.