Tuesday, September 22, 2026

BDA Apartments

ಸಿದ್ಧರಾಮಯ್ಯ ಸರ್ಕಾರವಿದ್ಧಾಗ ಹಿಂದೂಗಳ ಹತ್ಯೆ, ಭ್ರಷ್ಟಾಚಾರ ನಡೆಯುತ್ತಿತ್...
Home Front Page ಸಿದ್ಧರಾಮಯ್ಯ ಸರ್ಕಾರವಿದ್ಧಾಗ ಹಿಂದೂಗಳ ಹತ್ಯೆ, ಭ್ರಷ್ಟಾಚಾರ ನಡೆಯುತ್ತಿತ್ತು- ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆರೋಪ.

ಸಿದ್ಧರಾಮಯ್ಯ ಸರ್ಕಾರವಿದ್ಧಾಗ ಹಿಂದೂಗಳ ಹತ್ಯೆ, ಭ್ರಷ್ಟಾಚಾರ ನಡೆಯುತ್ತಿತ್ತು- ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆರೋಪ.

ಹುಬ್ಬಳ್ಳಿ,ಡಿಸೆಂಬರ್,29,2021(www.justkannada.in): ಸಿದ್ಧರಾಮಯ್ಯ ಸರ್ಕಾರವಿದ್ಧಾಗ ಹಿಂದೂಗಳ ಹತ್ಯೆ ನಡೆಯುತ್ತಿತ್ತು.  ದೊಡ್ಡ ದೊಡ್ಡ ಭ್ರಷ್ಟಾಚಾರ ನಡೆಯುತ್ತಿತ್ತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅರುಣ್ ಸಿಂಗ್, ಸಿದ್ಧರಾಮಯ್ಯ ಸರ್ಕಾರವಿದ್ಧಾಗ ದೊಡ್ಡ ದೊಡ್ಡ ಭ್ರಷ್ಟಾಚಾರ ಹೆಚ್ಚಾಗಿತ್ತು.  ದೇಶದ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಒಳಜಗಳವಿದೆ.  ಆದರೂ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಎಂದು ಕಿಡಿಕಾರಿದರು.

ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ. 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಅರುಣ್ ಸಿಂಗ್ ತಿಳಿಸಿದರು.

Key words: Siddaramaiah -government – Hindus murder –corruption-BJP- in-charge -Arun Singh