ವಿ.ಸೋಮಣ್ಣ ಪರ ನಟ ಕಿಚ್ಚ ಸುದೀಪ್ ಪ್ರಚಾರ: ಕಿಚ್ಚನ ನೋಡಲು ಮುಗಿಬಿದ್ದ ಅಭಿಮಾನಿಗಳು

ಚಾಮರಾಜನಗರ,ಮೇ,5,2023(www.justkannada.in): ಬಿಜೆಪಿ ಪರ ನಟ ಕಿಚ್ಚ ಸುದೀಪ್ ಪ್ರಚಾರದಲ್ಲಿ ತೊಡಗಿದ್ದು ಈ ನಡುವೆ ಇಂದು ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಕ್ಯಾಂಪೇನ್ ನಡೆಸಿದರು.

ಸಂತೇಮರಹಳ್ಳಿ ವೃತ್ತದ ಬಳಿ  ಪ್ರಚಾರದ ವೇಳೆ ಸುದೀಪ್ ಅವರನ್ನು​ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಚಾರ್ಜ್ ನಡೆಸಿದರು.

ಆಯತಪ್ಪಿ ಕಾರಿನಿಂದ ಬಿದ್ದ ವಿ.ಸೋಮಣ್ಣ.

ಪ್ರಚಾರದಲ್ಲಿ ಸುದೀಪ್ ಜೊತೆ ವಿ,ಸೋಮಣ್ಣ ಕಾರಿನ‌ ಮೇಲೆ ಜನರತ್ತ ಕೈ ಬೀಸುತ್ತಿದ್ದರು. ಈ ವೇಳೆ ಸುದೀಪ್ ಬಳಿ ತೆರಳಲು ಅಭಿಮಾನಿಯೊಬ್ಬ ಕಾರಿನ ಮೇಲೆ ಹತ್ತಿದ್ದು, ಈ ಸಮಯದಲ್ಲಿ ಆಯತಪ್ಪಿ ಸೋಮಣ್ಣರನ್ನು ಎಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಈ ವೇಳೆ ಕಾರಿನ ಟಾಟ್​​ನಿಂದ ಕೆಳಗೆ ಬೀಳದಂತೆ ಸೋಮಣ್ಣರನ್ನ ಅಲ್ಲಿದ್ದಅಕ್ಕಪಕ್ಕದವರು ಹಿಡಿದುಕೊಂಡರು.

Key words: Actor-Kiccha Sudeep -campaign -V. Somanna