Monday, September 28, 2026

BDA Apartments

Home Front Page ವರುಣಾದಲ್ಲಿ ನಟ ದುನಿಯಾ ವಿಜಯ್, ಲೂಸ್ ಮಾದ ಯೋಗಿ ಪ್ರಚಾರ: ಮತ್ತೆ ಸಿಎಂ ಆಸೆ ಬಿಚ್ಚಿಟ್ಟ...

ವರುಣಾದಲ್ಲಿ ನಟ ದುನಿಯಾ ವಿಜಯ್, ಲೂಸ್ ಮಾದ ಯೋಗಿ ಪ್ರಚಾರ: ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಸಿದ್ಧರಾಮಯ್ಯ.

ಮೈಸೂರು,ಮೇ,4,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ವರುಣಾ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಜೋರಾಗಿದ್ದು,  ಮಾಜಿ ಸಿಎಂ ಸಿದ್ಧರಾಮಯ್ಯ ಪರ  ನಟ ದುನಿಯಾ ವಿಜಯ್, ಲೂಸ್ ಮಾದ ಖ್ಯಾತಿಯ ಯೋಗಿ, ನಟಿ ನಿಶ್ವಿಕ ನಾಯ್ಡು ಕ್ಯಾಂಪೇನ್ ನಲ್ಲಿ ಭಾಗಿಯಾಗಿದ್ದಾರೆ.

ವರುಣಾ ಕ್ಷೇತ್ರದ ಚಿಕ್ಕಳಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ತೆರೆದ ವಾಹನದಲ್ಲಿ ಪ್ರಚಾರದ ಮೂಲಕ ಮತಯಾಚನೆ ಮಾಡುತ್ತಿದ್ದು ಸಿದ್ದರಾಮಯ್ಯಗೆ ನಟ ದುನಿಯಾ ವಿಜಯ್, ಲೂಸ್ ಮಾದ ಖ್ಯಾತಿಯ ಯೋಗಿ, ನಟಿ ನಿಶ್ವಿಕ ನಾಯ್ಡು ಸಾಥ್ ನೀಡಿದ್ದಾರೆ. ನಿನ್ನೆಯಷ್ಟೆ ಸಿದ್ದರಾಮಯ್ಯ ಪರ ನಟ ಶಿವರಾಜ್ ಕುಮಾರ್ ಕ್ಯಾಂಪೇನ್ ನಲ್ಲಿ ಪಾಲ್ಗೊಂಡಿದ್ದರು.ವರುಣಾದಲ್ಲಿ ನಟ ದುನಿಯಾ ವಿಜಯ್ siddramaiah.jpg 134

 ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ 2008ರಲ್ಲಿ ಗೆದ್ದು ವಿರೋಧ ಪಕ್ಷ ನಾಯಕನಾದೆ. 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದೆ.  ಈಗ ಮತ್ತೊಂದು ಅವಕಾಶ ಇದೆ ಪ್ರಚಾರದ ವೇಳೆ ಉತ್ತಮ ಸ್ಪಂದನೆ ಸಿಕ್ಕಿದೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ನಾನು ಗೆಲ್ಲುವುದು ಅಷ್ಟೇ ಸತ್ಯ‌ ಎಂದು ಹೇಳಿದ್ದಾರೆ.

Key words: Actor -Duniya Vijay-Loose Mada Yogi -campaign –Varuna- Siddaramaiah