ಮಕ್ಕಳನ್ನ ದೇಶದ ಆಸ್ತಿಯನ್ನಾಗಿ ರೂಪಿಸಲು ಪೋಷಕರ ಪಾತ್ರ ಮಹತ್ವವಾದುದು: ಆರ್ ರಘು ಕೌಟಿಲ್ಯ

ಮೈಸೂರು,ನವೆಂಬರ್,10,2021(www.justkannada.in): ಜೀವಧಾರ ಚಾರಿಟಬಲ್ ಟ್ರಸ್ಟ್ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ “ಮುದ್ದು ಕಂದ” 2021ರ ಪೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಅದರ ಪ್ರಚಾರ ಸಾಮಗ್ರಿಗಳನ್ನು ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿಗಳ ನಿಗಮದ ಅಧ್ಯಕ್ಷರಾದ ಆರ್. ರಘು ಕೌಟಿಲ್ಯ ರವರು  ಚಾಮುಂಡಿವಿಹಾರ ಬಡಾವಣೆಯಲ್ಲಿರುವ ತಮ್ಮ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಆರ್ ರಘು ಕೌಟಿಲ್ಯ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಸಣ್ಣಪುಟ್ಟ ಮಕ್ಕಳು ವಿಶೇಷ ಪ್ರತಿಭೆಗಳೊಂದಿಗೆ ಭಾಗವಹಿಸುತ್ತಿರುವುದು ನಮ್ಮ‌ ಸಂಸ್ಕೃತಿ ಹಿಂದೂಧರ್ಮದ ಹಿರಿಮೆ ಹೆಚ್ಚಿಸಿದೆ, ಪೋಷಕರು ತಮ್ಮ ಮಕ್ಕಳನ್ನ ದೇಶದ ಭವಿಷ್ಯದ ಆಸ್ತಿಯಾಗಿ ರೂಪಿಸಬೇಕು, ಕಳೆದ ಹತ್ತು ವರ್ಷದ ಹಿಂದೆ ಶಿಕ್ಷಣ ಪಡೆದ ಮಕ್ಕಳು ಹೊರದೇಶಕ್ಕೆ ಉದ್ಯೋಗಕ್ಕೆ ಹೋಗುತ್ತಿದ್ದರು ಆದರೆ ಇಂದು ನಮ್ಮ‌ ದೇಶದ  ಸಾಂಸ್ಕೃತಿಕತೆಯನ್ನ ಜವಬ್ದಾರಿಯನ್ನ ಅರಿತ ಮಕ್ಕಳು ವಿದೇಶಿಗರಿಗೆ ಕೆಲಸ ಕೊಡಿಸುವ ಮಟ್ಟಕ್ಕೆ ಬೆಳೆದಿದ್ದಾರೆ ಇದರಿಂದ ವಿಶ್ವಮಟ್ಟದಲ್ಲಿ ಭಾರತ ಬೆಳೆಯುತ್ತಿದೆ ಎಂದರು.

ಈ ವೇಳೆ ಅಂಕಣಕಾರ ಡಾ ರಂಗನಾಥ್ ,ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ,ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಕೇಬಲ್ ಮಹೇಶ್ ,ಅಜಯ್ ಶಾಸ್ತ್ರಿ , ವಿಜಯನಗರದ ಯೋಗೇಶ್ ,ಹಾಗೂ ಇನ್ನಿತರರು ಹಾಜರಿದ್ದರು.

Key words:  role – parent – crucial – children’s- country- property- R Raghu Kautilya