ಮೃತ ಚಿರಂಜೀವಿ ಸರ್ಜಾ ಕೋವಿಡ್-19 ಪರೀಕ್ಷೆ ವರದಿ ಬಂತು

ಬೆಂಗಳೂರು, ಜೂನ್ 08, 2020 (www.justkannada.in): ಹೃದಯಾಘಾತದಿಂದ ಮೃತಪಟ್ಟ ನಟ ಚಿರಂಜೀವಿ ಸರ್ಜಾ (39) ಅವರ ಗಂಟಲಿನ ದ್ರವವನ್ನು ಕೋವಿಡ್-19 ಪರೀಕ್ಷೆಗೆ ರವಾನಿಸಲಾಗಿತ್ತು.

ಅದರ ವರದಿ ನೆಗೆಟಿವ್ ಬಂದಿದೆ ಎಂದು ಅಪೋಲೋ ಆಸ್ಪತ್ರೆ ಮೂಲಗಳು ದೃಢಪಡಿಸಿವೆ. ಆರೋಗ್ಯ ಇಲಾಖೆ ಸೂಚನೆಯಂತೆ ಚಿರಂಜೀವಿ ಸರ್ಜಾ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ.

ಸದ್ಯ ಆಸ್ಪತ್ರೆಗಳಲ್ಲಿ ಮರಣ ಹೊಂದಿದರೆ ಕೋವಿಡ್-19 ಟೆಸ್ಟ್ ನಡೆಸಲಾಗುತ್ತಿದೆ. ಮೈಕಲ್ ಮಂಜು ಮೃತಪಟ್ಟಾಗಲೂ ಕೊರೊನಾ ಪರೀಕ್ಷೆ ನಡೆಸಿ ಬೇಗ ವರದಿ ನೀಡಲಾಗಿತ್ತು.