Sunday, October 11, 2026

Dasara Wishes

Happy Dasara
Home Front Page ನಮಗೂ ಮೆಡಿಕಲ್ ಕಾಲೇಜು ಕೊಡಿ- ಸಿಎಂ ಬಿಎಸ್ ವೈ ಭೇಟಿಯಾಗಿ ಮನವಿ ಸಲ್ಲಿಸಿದ ಮಾಜಿ ಸಚಿವ...

ನಮಗೂ ಮೆಡಿಕಲ್ ಕಾಲೇಜು ಕೊಡಿ- ಸಿಎಂ ಬಿಎಸ್ ವೈ ಭೇಟಿಯಾಗಿ ಮನವಿ ಸಲ್ಲಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್…

ಬೆಂಗಳೂರು,ಫೆ,18,2020(www.justkannada.in): ಹಿಂದಿನ ಬಜೆಟ್ ನಲ್ಲಿ ಘೋಷಣೆಯಾಗಿರುವ ಮೆಡಿಕಲ್ ಕಾಲೇಜನ್ನ ಕನಕಪುರಕ್ಕೆ ನೀಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮನವಿ ಸಲ್ಲಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಹಿಂದಿನ ಬಜೆಟ್ ಪುಸ್ತಕವನ್ನ ಸಿಎಂ ಬಿಎಸ್ ವೈಗೆ ನೀಡಿ  ಕಳೆದ ಬಜೆಟ್ ನಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಘೋಷಣೆಯಾಗಿದೆ. ಇದಕ್ಕೆ ನೀವೇ ಅನುಮೋದನೆ ನೀಡಿದ್ದೀರಿ. ಆದರೆ ಈಗ ಅದನ್ನ ಸ್ಥಳಾಂತರ ಮಾಡಿದ್ದೀರಿ. ಹೀಗಾಗಿ ಬಜೆಟ್ ನಲ್ಲಿರುವಂತೆ ನಮಗೂ ಮೆಡಿಕಲ್ ಕಾಲೇಜು ಮಂಜೂರು ಮಾಡಿ ಎಂದು ಮನವಿ ಸಲ್ಲಿಸಿದರು.

Key words: medical college-Former minister -DK Sivakumar -appealed – CM BSY.