Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಟಿ 20 ವಿಶ್ವಕಪ್: ಭಾರತ-ಪಾಕ್ ಫೈಟ್’ಗೆ ವೇದಿಕೆ ಸಜ್ಜು !

ಟಿ 20 ವಿಶ್ವಕಪ್: ಭಾರತ-ಪಾಕ್ ಫೈಟ್’ಗೆ ವೇದಿಕೆ ಸಜ್ಜು !

ಬೆಂಗಳೂರು, ಜುಲೈ 17, 2021 (www.justkannada.in): ಟಿ 20 ವಿಶ್ವಕಪ್ 2021ನಲ್ಲಿ ಭಾಗವಹಿಸುವ ತಂಡಗಳ ಗುಂಪನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ.

2021 ರ ಮಾರ್ಚ್ 20 ರ ವೇಳೆಗೆ ತಂಡದ ಶ್ರೇಯಾಂಕದ ಆಧಾರದ ಮೇಲೆ ರಚನೆಯಾದ ಈ ಗುಂಪಿನಲ್ಲಿ ಭಾರತ-ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಎಂಟು ತಂಡಗಳು ಐಸಿಸಿ ಪುರುಷರ ಟಿ 20 ವಿಶ್ವಕಪ್ ಅರ್ಹತಾ 2019ರ ಮೂಲಕ ತಮ್ಮ ಸ್ಥಾನವನ್ನು ಕಾಯ್ದಿರಿಸಿದ ಉಳಿದ ಆರು ತಂಡಗಳೊಂದಿಗೆ ಮೊದಲ ಸುತ್ತಿನಲ್ಲಿ ಸ್ಪರ್ಧಿಸಲಿವೆ.

ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಪಂದ್ಯಾವಳಿ ನಡೆಯಲಿದೆ.

ಗುಂಪುಗಳು:

ಮೊದಲ ಸುತ್ತಿನಲ್ಲಿ
ಗುಂಪು ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ

ಗುಂಪು ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್

ಸೂಪರ್ 12
ಗುಂಪು 1: ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಎ 1 ಮತ್ತು ಬಿ 2.
ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಎ 2 ಮತ್ತು ಬಿ 1.