ನಟ ದರ್ಶನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್.

ಬೆಂಗಳೂರು,ಜುಲೈ,16,2021(www.justkannada.in):  ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ  ಪ್ರಕರಣ ಸಂಬಂಧ ನಟ ದರ್ಶನ್ ಕ್ಷಮೆ ಕೇಳಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ.jk

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್,  ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಮಾಧ್ಯಮ ಹಿತದೃಷ್ಟಿಯಿಂದ ಮುಂದೆ ಬಂದಿದ್ದೇನೆ. ಬಡವರಿಗೆ ಸಾಮಾನ್ಯ ಜನರಿಗೆ ಅನ್ಯಾಯವಾಗಿದೆ.   ಸಪ್ಲೇಯರ್ ಗೆ ನ್ಯಾಯ ಕೊಡಿಸುವುದಕ್ಕಾಗಿ ಮುಂದೆ ಬಂದಿದ್ದೇನೆ. ನೋವು ಅನುಭವಿಸಿದವರ ಬಳಿ ದರ್ಶನ್ ಕ್ಷಮೆ ಕೇಳಬೇಕು. ಕ್ಷಮೆ ಕೇಳಿದರೇ ಅದಕ್ಕಿಂತ ಏನು ಬೇಕಿಲ್ಲ.  ಒಬ್ಬ ನಟನಾಗಿ ನೀವು ಮಾದರಿಯಾಗಬೇಕು. ಇದನ್ನ ಹೀಗೆ ಮುಂದವರೆಸಿದರೇ  ನಿಮಗೆ ಕೆಟ್ಟಹೆಸರು. ಕ್ಷಮೆ ಕೇಳಿ ನ್ಯಾಯ ಒದಗಿಸಿದರೇ ಏನು ಕಳೆದಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.

ಸಪ್ಲೇಯರ್ ಕೂಡ ಕೆಲಸಕಳೆದುಕೊಳ್ಳುವ ಭೀತಿಯಿಂದ ಹೊರಗೆ ಬಂದು ಮಾತನಾಡಲು ಅಂಜುತ್ತಾರೆ. ಪೊಲೀಸ್ ತನಿಖೆಗೆ ನಾನು ಸಹಕಾರ ನೀಡಲು ಬದ್ದ ಎಂದರು. ಪತ್ರಕರ್ತನಾಗಿ ಹಲವು ಬಾರಿ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯನ್ನ ಭೇಟಿಯಾಗಿದ್ದೇನೆ.  ಈ ವಿಚಾರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರನ್ನ ತರಬೇಡಿ ಎಂದು ಇಂದ್ರಜಿತ್ ಲಂಕೇಶ್ ಮನವಿ ಮಾಡಿದರು.

Key words: Director- Indrajit Lankesh- demanded -actor Darshan-apologize.