ದೃಶ್ಯ 2ರಲ್ಲಿ ರವಿಚಂದ್ರನ್ ಜತೆ ಅನಂತನಾಗ್ !

ಬೆಂಗಳೂರು, ಜುಲೈ 17, 2021 (www.justkannada.in): ದೃಶ್ಯ ಮುಂದುವರೆದ ಭಾಗ ದೃಶ್ಯ 2ರಲ್ಲಿ ಹಿರಿಯ ನಟ ಅನಂತನಾಗ್ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ  ಚಿತ್ರದ ಮುಹೂರ್ತ ಸಮಾರಂಭ ಯಲಹಂಕದ ಬಳಿಯ ವೈಟ್ ಹೌಸ್‍ನಲ್ಲಿ ಸರಳವಾಗಿ ನೆರವೇರಿತು. ರವಿಚಂದ್ರನ್.ವಿ, ಅನಂತನಾಗ್, ಪಿ.ವಾಸು ಅವರು ಸೇರಿದಂತೆ ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು.

ದೃಶ್ಯ 2 ಚಿತ್ರತಂಡ ಸೇರಿಕೊಂಡಿರುವುದಕ್ಕೆ ನಟ ಅನಂತನಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಕಳೆದ ಒಂದುವರೆ ವರ್ಷದಿಂದ ಮನೆಬಿಟ್ಟು ಆಚೆ ಬಂದಿಲ್ಲ. ಬಹಳ ದಿನಗಳ ನಂತರ ಆಚೆ ಬಂದಿರುವುದು ನನಗೆ ಖುಷಿಯಾಗಿದೆ ಎಂದಿದ್ದಾರೆ.

ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕï, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.