‘ವಿಕ್ರಾಂತ್ ರೋಣ’ ಶೂಟಿಂಗ್ ಕಂಪ್ಲೀಟ್: ಜಾಕ್ವೆಲಿನ್ ಗೆ ಕೃತಜ್ಞತೆ ಸಲ್ಲಿಸಿದ ಕಿಚ್ಚ ಸುದೀಪ್ !

ಬೆಂಗಳೂರು, ಜುಲೈ 17, 2021 (www.justkannada.in): ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ.

ಹೌದು. ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಂಬಂಧ ಸುದೀಪ್ ಟ್ವೀಟ್ ಕೂಡ ಮಾಡಿದ್ದಾರೆ. ಕಳೆದ ವರ್ಷ ಮಾರ್ಚ್ 02ಕ್ಕೆ ಸಿನಿಮಾ ಪ್ರಾರಂಭವಾಗಿತ್ತು. ಒಂದೂವರೆ ವರ್ಷದ ಬಳಿಕ ನಿನ್ನೆ ಚಿತ್ರೀಕರಣ ಮುಗಿಸಿದ್ದೇವೆ. ಚಿತ್ರತಂಡವನ್ನು ಹಾಗೂ ಸೆಟ್‌ಗೆ ಹೋಗುವುದನ್ನು ನಾನು ಬಹುವಾಗಿ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ.

ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದ್ದಕ್ಕೆ ಧನ್ಯವಾದ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮ ನೃತ್ಯ ನನ್ನನ್ನೂ ಒಂದೆರಡು ಸ್ಟೆಪ್ ಹಾಕುವಂತೆ ಪ್ರೇರೇಪಿಸಿತು ಎಂದು ಮತ್ತೊಂದು ಟ್ವೀಟ್ ನಲ್ಲಿ ಜಾಕ್ವೆಲಿನ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ ಕಿಚ್ಚ