ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ ಅಜಾಜ್ ಪಟೇಲ್.

ಮುಂಬೈ,ಡಿಸೆಂಬರ್,4,2021(www.justkannada.in): ಇಂಗ್ಲೆಂಡ್‌ನ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಬಳಿಕ ಇದೀಗ ನ್ಯೂಜಿಲ್ಯಾಂಡ್ ನ ಬೌಲರ್ ಅಜಾಜ್ ಪಟೇಲ್ ಒಂದೇ ಇನ್ನಿಂಗ್ಸ್ 10 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.

ನ್ಯೂಜಿಲೆಂಡ್‌ನ ಎಜಾಜ್ ಪಟೇಲ್ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಬೌಲರ್ ಮತ್ತು ತಮ್ಮ ದೇಶದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಂಬೈನಲ್ಲಿ ಭಾರತ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ ನಲ್ಲಿ ಅಜಾಜ್ ಪಟೇಲ್ ಈ ಸಾಧನೆ ಮಾಡಿದ್ದಾರೆ.  ಜುಲೈ 1956 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೇಂಡ್ ನ ಜಿಮ್ ಲೇಕರ್ ಈ ದಾಖಲೆ ಮಾಡಿದ್ದರು. ಬಳಿಕ ಭಾರತ ತಂಡದ ಅನಿಲ್ ಕುಂಬ್ಳೆ ಫೆಬ್ರವರಿ 1999 ರಲ್ಲಿ ಪಾಕಿಸ್ತಾನದ ವಿರುದ್ಧ ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್ ಪಡೆದು ಈ ಇತಿಹಾಸ ನಿರ್ಮಿಸಿದ್ದರು.

ಇದೀಗ ಅಜಾಜ್ ಪಟೇಲ್ ಇದೇ ದಾಖಲೆಯನ್ನ ನಿರ್ಮಿಸಿದ್ದಾರೆ. ಸದ್ಯ ಸ್ಕೋರ್ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 325ಕ್ಕೆ ಆಲ್ ಔಟ್ ಆಗಿದ್ದು ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ 17ಕ್ಕೆ 3 ವಿಕೆಟ್ ಕಳೆದುಕೊಂಡಿದೆ.

Key words: newzland- Ajaz Patel -holds -record – 10 wickets – single innings.